* 10 ಅಡಿ ಎತ್ತರ 15 ಅಡಿ ಅಗಲ ಬಂಡ್
* ಬಂಡ್ ಮೇಲೆ ಸುತ್ತ ಗಿಡಗಳನ್ನು ನೆಡುವುದು
* ಪಾಲಿಕೆಯಿಂದ ಕಾಮಗಾರಿ
* 100ರಿಂದ 150 ಅಡಿ ಅಗಲೀಕರಣ
* ಸಹಕಾರ ಬೇಕು ಟೀಕೆ ಅಲ್ಲ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.13: ಯಾರು, ಏನಾದರೂ ಜನರ ಒಳಿತಿಗಾಗಿ ಮಾಡಿದರೆ ಅದಕ್ಕೆ ಸಹಕಾರ ಬೇಕು, ಟೀಕೆ ಅಲ್ಲ ಎಂಬುದು ಅಂದ್ರಾಳ್ ಸೇವಾ ಸಮಿತಿಯ ಹೇಳಿಕೆ.
ನಗರದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಹರಿಯುತ್ತಿರುವ ಗಂಗಮ್ಮನಹಳ್ಳ(ಗೊಜ್ಜಲಹಳ್ಳ). ಇದು ಬೆಳಗಲ್ಲು ಕಡೆಯಿಂದ ಹರಿದು ನಗರದ ಮೂಲಕ ಬಿಸಲಳ್ಳಿ ಸಮೀಪದಲ್ಲಿ ಹರಿದು ಅಂತಿಮವಾಗಿ ಹಗರಿ ಸೇರುತ್ತದೆ.
ನಗರದ ಐದು ವಾರ್ಡುಗಳ ವ್ಯಾಪ್ತಿಯಲ್ಲಿ ಹರಿಯುವ ಈ ಹಳ್ಳ ಹೂಳು ತುಂಬಿಕೊಂಡು, ಮುಳ್ಳು ಕಂಟಿ ಬೆಳೆದು ನೀರು ಸರಾಗವಾಗಿ ಹರಿದು ಹೋಗುತ್ತಿರಲಿಲ್ಲ. ಇದರಿಂದ ಹೆಚ್ಚಿನ ಮಳೆಯಾದಾಗ ನೀರು ಅಕ್ಕ ಪಕ್ಷದ ನಿವೇಶನ, ಮನೆ, ಗುಡಿಸಲುಗಳಿಗೆ ನುಗ್ಗುತ್ತಿತ್ತು.
ಅದಕ್ಕಾಗಿ ಪಾಲಿಕೆಯಲ್ಲಿ 17, 8, 5 ಮೊದಲಾದ ವಾರ್ಡುಗಳ ಕಾರ್ಪೊರೇಟರ್ ಗಳು ಈ ಸಮಸ್ಯೆ ಗಮನಕ್ಕೆ ತಂದು ಹಳ್ಳದಲ್ಲಿನ ಹೂಳು ತೆಗೆದು ದಂಡೆ ಮೇಲೆ ಹಾಕಲು ಕಾರ್ಯಯೋಜನೆ ರೂಪಿಸಿ ಕೆಲಸ ಆರಂಭಗೊಂಡಿದೆ. ಹಳ್ಳದ ಐದು ವಾರ್ಡುಗಳ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆದಿದೆ.
ಹಳ್ಳದಲ್ಲಿ 100 ರಿಂದ 150 ಅಡಿ ಅಗಲದಲ್ಲಿದ್ದ ಹೂಳನ್ನು ತೆಗೆದು ಎರೆಡು ಬದಿಯಲ್ಲಿ 10 ಅಡಿ ಎತ್ತರ 15 ಅಗಲದ ದಂಡೆ ಮಾಡಲಾಗಿದೆ ಹೂಳಿನ ಮಣ್ಣಿನಿಂದ. ಈ ದಂಡೆ ಮೇಲೆ ಗಿಡಗಳನ್ನು ನೆಡುವ ಯೋಜನೆ ಪಾಲಿಕೆಯದ್ದು.
ಅಂದ್ರಾಳು ಬಳಿ ಕಳೆದ ಮೂರು ದಿನಗಳಿಂದ ಹಳ್ಳದ ಹೂಳನ್ನು ತೆಗೆದು ದಂಡೆ ಕಟ್ಟಿ ಮಧ್ಯ ಭಾಗದಲ್ಲಿ ಉಳಿದ ಹೂಳನ್ನು ಗ್ರಾಮದ ದೇವಸ್ಥಾನಗಳಿಗೆ, ಸಾರ್ವಜನಿಕ ಸ್ಥಳದ ತಗ್ಗುಪ್ರದೇಶ ಮುಚ್ಚಲು
ಅಲ್ಲಿನ ಕಾರ್ಪೊರೇಟರ್ ರಾಮಾಂಜನೇಯಲು ಅವರು ಸ್ವಂತ ಕರ್ಚಿನಿಂದ ಸಾಗಾಟ ಮಾಡಿದ್ದಾರಂತೆ.
:ಮೆಚ್ಚುಗೆ ಇದೆ:
ನಾವು ಇಂತಹ ಉತ್ತಮ ಕಾರ್ಯ ಮಾಡಿದ್ದೇವೆ. ಈ ಬಗ್ಗೆ ಜನರ ಮೆಚ್ಚುಗೆ ಇದೆ. ಇಂತಹುದಕ್ಕೆ ಯಾರೇ ಆಗಲಿ ಸಹಕಾರ ನೀಡಬೇಕು ಹೊರೆತು ಟೀಕೆ ಅಲ್ಲ. ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಮ್ಮ ಲೇಔಟ್ ಗೆ ಮಣ್ಣು ತೆಗೆದುಕೊಂಡಿದ್ದಾರೆ ಎಂಬ ಆರೋಪ ಸುಳ್ಳು.
ಎಂ. ರಾಮಾಂಜನೆಯಲು
8 ವಾರ್ಡು, ಕಾರ್ಪೊರೇಟರ್.
ಪರಿಶೀಲಿಸಲಿದೆ:
ಹಳ್ಳದ ಹೂಳಿನ ಮಣ್ಣನ್ನು ಪಾಲಿಕೆ ಸದಸ್ಯರು ತಮ್ಮಲೆಔಟ್ ಗೆ ಹಾಕಿಕೊಂಡಿದ್ದಾರೆಂಬ ದೂರು ಬಂದಿದೆ. ಈ ಬಗ್ಗೆ ಇಂದ ಪರಿಶೀಲನೆ ಮಾಡಿ ತಪ್ಪಿದ್ದರೆ ಕ್ ತೆಗೆದುಕೊಳ್ಳಲಿದೆ. ಬಂಡ್ ಮೇಲೆ ಗಿಡ ಹಾಕಿ ಜನತೆ ಅದರ ಮೇಲೆ ಓಡಾಡುವಂತೆ ಮಾಡಲಿದೆ.
ಎಂ.ಎನ್.ರುದ್ರೇಶ್
ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ.
:ಒಳ್ಳೆ ಕೆಲಸ:
ಕಳೆದ 50 ವರ್ಷಗಳಲ್ಲಿ ಮಾಡದ ಕೆಲಸ ಈಗ ಆಗುತ್ತಿದೆ. ಹಳ್ಳದಲ್ಲಿ ಹೂಳು ತುಂಬಿ, ಮಳೆಗಾಲದಲ್ಲಿ ನೀರು ಗ್ರಾಮಕ್ಕೆ ನೀರು ನುಗ್ಗುವುದು ತಪ್ಪಲಿದೆ. ಇದು ಒಳ್ಳೆಯ ಕೆಲಸವಾಗಿದೆ.
ಆರ್. ವೆಂಕಟರೆಡ್ಡಿ
ಅಂದ್ರಾಳ್ ಸೇವಾ ಸಮಿತಿ