ಖ್ಯಾತ ಶಿಲ್ಪ ಕಲಾವಿದ ನಾಗಪ್ಪ ಪ್ರದಾನಿ ಅವರಿಗೆ ದೃಶ್ಯ ಬೆಳಕು ಗೌರವ ಪ್ರಶಸ್ತಿ ಪ್ರದಾನ

ಕಲಬುರಗಿ,ನ.14-ಇಲ್ಲಿನ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ರಂಗಾಯಣದ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಂಡಿರುವ 8ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿಂದು ಖ್ಯಾತ ಶಿಲ್ಪ ಕಲಾವಿದ ನಾಗಪ್ಪ ಪ್ರದಾನಿ ಅವರಿಗೆ ದೃಶ್ಯ ಬೆಳಕು ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
8ನೇ ವಾರ್ಷಿಕ ಕಲಾ ಸ್ಪರ್ಧೆಯ ಪ್ರಶಸ್ತಿ ವಿಜೇತರಾದ ಕಾವೇರಿ ಪೂಜಾರ, ಶ್ರೀದತ್ತ ಗಡಾದೆ, ಗಿರೀಶ ಕುಲಕರ್ಣಿ, ವಿನೋದ ಅರ್ಜುನ, ಸಂತೋಷಸಿಂಗ್ ಹಜೇರಿ, ಹಣಮಂತ ಬಾಡದ ಅವರಿಗೆ ದೃಶ್ಯ ಬೆಳಕು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಚಿತ್ರಕಲಾವಿದ ಬಸವರಾಜ ಎಲ್.ಜಾನೆ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಶಿಲ್ಪ ಕಲಾವಿದ ಮಾನಯ್ಯ ಬಡಿಗೇರ, ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ, ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಅಧ್ಯಕ್ಷ ಡಾ.ಪರಶುರಾಮ ಪಿ., ಕಾರ್ಯದರ್ಶಿ ನಯನಾ ಬಿ. ಉಪಸ್ಥಿತರಿದ್ದರು.
ಇದೇ ವೇಳೆ ಕರ್ನಾಟಕ ಲಲಿತಕಲಾ ಅಕಾಡೆಮಿಯ 49ನೇ ವಾರ್ಷಿಕ ಕಲಾ ಪ್ರದರ್ಶನದ ಬಹುಮಾನಿತರಾದ ಸಂತೋಷ ರಾಠೋಡ, ಚಂದ್ರಶೇಖರ ಪಾಟೀಲ, ದಸ್ತಗಿರಿ ಮಸ್ತಾನಸಾಬ ಹಾಗೂ ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಪ್ರಸಾದ ಬನ್ನಟ್ಟಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.