
ಕಲಬುರಗಿ:ಅ.02:ಖ್ಯಾತ ಹಿನ್ನಲೆಗಾಯಕ, ಕಲಾವಿದ, ಅನೇಕ ಕಲಾವಿದರ ಕಂಠಸಿರಿಯಾಗಿದ್ದ ಕಿಶೋರ ಕುಮಾರ ಅವರ ಜನ್ಮದಿನದ ಅಂಗವಾಗಿ ದಿನಾಂಕ:04-08-2023ರ ಸಂಜೆ 6 ಗಂಟಗೆ ಕಲಬುರಗಿ ನಗರದ ಎಸ್.ವಿ.ಪಿ ಚೌಕ್ ಹತ್ತಿರದ ಕನ್ನಡ ಭವನದಲ್ಲಿ ಪಲ್.. ಪಲ್… ದಿಲ್ ಕೆ ಪಾಸ್……. ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಲಾಕರ ಸ್ಟೂಡಿಯೋ ಆರ್ಟ್‍ಸ್ಟ್ ಅವರಿಂದ ಪ್ರಸ್ತುತ ಪಡಿಸುವ ವಾಲ್ಮೀಕಿ ಕಾಂಬಳೆ, ಚಾಂದ್ ಜಾಕ್ಸ್‍ನ್, ವಿಠ್ಠಲ ಮೇತ್ರೆ, ಚಂದ್ರಶೇಖರ ರೆಡ್ಡಿ, ರಾಜು ರೆಡ್ಡಿ, ಝಮೀರ್ ಅಹ್ಮದ್, ರಾಜೇಶ ರಾಂಪೂರೆ, ಪಾರ್ವತಿ ಉರ್ಕಿಮಠ, ಶೈಲಜಾ ಹಾಗೂ ಅನೇಕ ಕಲಾವಿದರಿಂದ ಕಿಶೋರ ಕುಮಾರ ಅವರ ಜನಪ್ರಿಯ ಗೀತೆಗಳೊಂದಿಗೆ ಕನ್ನಡ, ಹಿಂದಿ ಸುಮಧುರ ಗೀತ ಗಾಯನ ನಡೆಯಲಿದೆ. ಮಹಾದೇವ ಅಷ್ಠಗಿ ಅವರಿಂದ ಧ್ವನಿವರ್ಧಕ ವ್ಯವಸ್ಥೆ ಹಾಗೂ ಬೆಳಕು ಸಂಯೋಜನೆಯನ್ನು ಆಕಾಶ ಅವರಿಂದ ಇರಲಿದೆ. ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು ಸಂಗೀತ ಕಾರ್ಯಕ್ರಮದ ರಸದೌತಣವನ್ನು ಸವಿಯಬೇಕು ಎಂದು ಆಯೋಜಕರಾದ ವಾಲ್ಮೀಕಿ ಕಾಂಬಳೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.