ಖೋ-ಖೋ ಕ್ರೀಡಾಪಟುಗಳ ಆಯ್ಕೆ


  ದಾವಣಗೆರೆ ಜ.10;  ಆಂದ್ರಪ್ರದೇಶದ ಕಾಕಿನಾಡದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಖೋ-ಖೋ ಪಂದ್ಯಾವಳಿಗೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಹತ್ತು ಜನ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.ಅಂತರ ವಿವಿ ಖೋ ಖೋ ಪಂದ್ಯಾವಳಿಯಲ್ಲಿ ಅರ್ಜುನ, ಶರತ್‍ಜೆ.ಜಿ, ಬಾಹುಬಳಿ ಎಸ್ ಬಿ, ಗಜಚೌಹಣ್, ಮಹಮ್ಮದ್ ತಾಸೀನ್, ಭರತ್‍ಕುಮಾರ್ ಪಿ.ಬಿ., ದರ್ಶನ್ ಎ ಟಿ, ಶರೀಫ್‍ಯಲಿಗಾರ್, ಲಕ್ಷ್ಮಣ್ ಮತ್ತು ಲಂಕೇಶ್ ಭಾಗವಹಿಸಿದ್ದಾರೆ. ರಾಮಲಿಂಗಪ್ಪ ಜೆ. ಇವರು ಸದರಿ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.