ಖೋ ಖೋ, ಕಬ್ಬಡಿ ಪಂದ್ಯಾವಳಿ:ತಾಲೂಕು ಮಟ್ಟಕ್ಕೆ ಆಯ್ಕೆ

ರಾಯಚೂರು, ನ.೦೯- ತಾಲೂಕಿನ ಯದ್ಲಾಪೂರು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಕ್ರೀಡಾಕೂಟ ಖೋ ಖೋ ಮತ್ತು ಕಬ್ಬಡಿ ಪಂದ್ಯಾವಳಿ ಸ್ಪರ್ಧೆಯಲ್ಲಿ ಗಂಜಹಳ್ಳಿ ಗ್ರಾಮದ ಯುವಕರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗ್ರಾಮದ ಯುವಕರು ಪ್ರಥಮ ಸ್ಥಾನದಲ್ಲಿ ಜಯಗಳಿಸಿದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಪ್ಪ ಡೋಣಿ, ಉಪಾಧ್ಯಕ್ಷ ಲಕ್ಷ್ಮಿ ಹನುಮಂತು, ಸರ್ವಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚನ್ನಮ್ಮ ತಿರುಮಲರೆಡ್ಡಿ, ಸೇರಿದಂತೆ ಗ್ರಾಮದ ಯುವಕರು ಇದ್ದರು.