ಖೋಟಾ ನೋಟ್ ಪ್ರಿಂಟ್ ಮಾಡುತ್ತಿದ್ದಬಿಸಲಳ್ಳಿಯ ಇಬ್ಬರ ಬಂಧನ


* 100 ನೋಟ್ ಮುದ್ರಣ
* ಬ್ಯಾಂಕ್ ಆಫ್ ಬರೋಡದಲ್ಲಿ ಕೆಲಸ
* ನಗರದ ಲಾಡ್ಜ್ ನಲ್ಲಿ ಮುದ್ರಣ
* ಕಲರ್ ಜೆರಾಕ್ಸ್ ನಿಂದ ಮುದ್ರಣ
* ಗಾಂಧಿನಗರ ಪೊಲೀಸರಿಂದ ಬಂಧನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.14: ದಿನಾಲು ಬ್ಯಾಂಕಿನಲ್ಲಿ ಹಣದ ವಹಿವಾಟು ನೋಡಿದ್ದ  ಬ್ಯಾಂಕ್ ಆಫ್ ಬರೋಡದ ಗುತ್ತಿಗೆ ನೌಕರ ಖೋಟಾ ನೋಟ್ ಮುದ್ರಿಸಿ ಚಲಾಯಿಸಿದರೆ ಹೇಗೆಂದು ಕಲರ್ ಜೆರಾಕ್ಸ್ ಮಾಡಲು ಮುಂದಾಗಿದ್ದು.  ಆತನ ಜೊತೆ ಮತ್ತೊಬ್ಬ ಸೇರಿದ್ದ. ಈ ಇಬ್ಬರನ್ನು ನಿನ್ನೆ ಸಂಜೆ ಗಾಂಧಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದ ಹೊರವಲಯದ ಬಿಸಲಳ್ಳಿ ಗ್ರಾಮದ ಹರಿಜನ ಕೇರಿಯ ಕೊಲ್ಲಾಪುರಮ್ಮ ದೇವಸ್ಥಾನದ ಬಳಿ ನಿವಾಸಿಗಳಾದ ಗಂಗಣ್ಣನ ಮಗ ಎ.ಕೆ.ಬಸವರಾಜ್ ಅಲಿಯಾಸ್ ಅಶೋಕ್(25) ಈತ ಬ್ಯಾಂಕ್ ಆಫ್ ಬರೋಡದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ.
ಈತನನ್ನು ಮತ್ತು ಇದೇ ಪ್ರದೇಶದ ನಿವಾಸಿ  ಹೊನ್ನೂರಸ್ವಾಮಿಯವರ ಮಗ ಹರೀಶ್ (25) ನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದ ಕೊಲಚಲಂ ಕಾಂಪೌಂಡಿನ ಮೋಹನ್ ಲಾಡ್ಜ್ ನಲ್ಲಿ ನೋಟು ಮುದ್ರಿಸುವಾಗ ಬಂಧಿಸಲಾಗಿದೆ.
ಬಂಧಿತರಿಂದ 100 ರೂ ಮುಖ ಬೆಲೆಯ 80 ನೋಟ್, ಜೆರಾಕ್ಸ್ ಯಂತ್ರ ಮತ್ತಿತರೇ ಸಾಮಾಗ್ರಿ ವಶಪಡಿಸಿಕೊಳ್ಳಲಾಗಿದೆ.
ಗಾಂಧಿನಗರ ಠಾಣೆಯ ಪಿಐ ಸಿದ್ದರಾಮೇಶ್ವರ ಗಡಾದ ಮತ್ತವರ ಸಿಬ್ಬಂದಿ ಈ ದಾಳಿ ನಡೆಸಿ. ಪ್ರಕರಣ ದಾಖಲಿಸಿದೆ.
ಬಲ್ಲ ಮೂಲಗಳ ಪ್ರಕಾರ  ಇನ್ನಿಬ್ಬರನ್ನು ಈ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆನಂತರ ಬಿಡಲಾಗಿದೆಂದು ತಿಳಿದು ಬಂದಿದೆ.
ಈ ಖೋಟಾ ನೋಟು ಮುದ್ರಣ ಯಾವಾಗಿನಿಂದ ಆರಂಭಗೊಂಡಿದೆ. ಇವನ್ನು ಎಲ್ಲಿ ಚಲಾಚಣೆ ಮಾಡುತ್ತಿದ್ದರು. ಬ್ಯಾಂಕ್ ಬರೋಡದಲ್ಲಿಯೇ ಇತರೇ ನೋಟುಗಳ ಜೊತೆ ಸೇರಿಸುತ್ತಿದ್ದರೆ. ಇದರ ಹಿಂದೆ ಮತ್ಯಾರು ಇದ್ದಾರೆಂಬುದನ್ನು ಪೊಲೀಸರೇ ತನಿಖೆಯ ಮೂಲಕ ಹೊರ ಹಾಕಬೇಕಿದೆ.