ಖೋಟಾ ನೋಟು ಚಲಾವಣೆ 6 ಮಂದಿ ಖದೀಮರ ಸೆರೆ

ಕಾರವಾರ, ಜೂ.2- ಖೋಟಾ ನೋಟು ಚಲಾವಣೆ ಮಾಡುತ್ತಿದ್ದ 6 ಮಂದಿ ಖದೀಮರನ್ನು ‌ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕಿರಣ ದೇಸಾಯಿ (40), ಗಿರೀಶ ಪೂಜಾರಿ (42), ಬೆಳಗಾವಿಯ ಅಮರ ನಾಯ್ಕ (30), ಸಾಗರ ಕುಣ್ಣೂರ್ಕರ್ (28), ದಾಂಡೇಲಿಯ ಶಬ್ಬೀರ್ ಕುಟ್ಟಿ (45), ಶಿವಾಜಿ ಕಾಂಬ್ಳೆ (52)ಬಂಧಿತ ಆರೋಪಿಗಳಾಗಿದ್ದಾರೆ
ಬಂಧಿತರಿಂದ 4.5 ಲಕ್ಷ ಮೌಲ್ಯದ 72 ಲಕ್ಷ ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.ಖೋಟಾ ನೋಟು ಜಾಲಕ್ಕೆ ಬಳಸಿದ್ದ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಅಸಲಿ ನೋಟು ಪಡೆದು ನಕಲಿ ನೋಟು ನೀಡಲು ಮುಂದಾಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ವ್ಯವಹಾರಕ್ಕೆ ಬಳಸಿದ್ದ ಎರಡು ಕಾರು ವಶಪಡಿಸಿಕೊಂಡ ಪೊಲೀಸರು, ಬೃಹತ್ ಪ್ರಮಾಣದ ಖೋಟಾ ನೋಟು ವ್ಯವಹಾರವನ್ನು ಬಯಲು ಮಾಡಿದ್ದಾರೆ.
ಡಿಡಿಎಲ್ ವನಶ್ರೀ ಭಾಗದ ಶಿವಾಜಿ ಕಾಂಬ್ಳೆ ಎನ್ನುವವರ ಮನೆಯಲ್ಲಿ ವಾಹನ ವಶಕ್ಕೆ ಪಡೆಯಲಾಗಿದೆ. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.