ಖೋಟಾ ನೋಟು ಚಲಾವಣೆ ವ್ಯಕ್ತಿಯ ಬಂಧನ

ಹರಿಹರ ಡಿ 25  ಖೋಟಾ  ನೋಟು ಚಲಾವಣೆ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಹರಿಹರ ನಗರ ಠಾಣೆಯಲ್ಲಿ ನಡೆದಿದೆ ವಿನೋದ 19 ವರ್ಷ ಬಂಧಿತ ಆರೋಪಿ  100 ಮುಖ ಬೆಲೆ ಬಾಳುವ ನೋಟುಗಳನ್ನು ಚಲಾವಣೆ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹರಿಹರ ನಗರದ ತರಕಾರಿ ಮಾರುಕಟ್ಟೆಯಲ್ಲಿ 100 ರೂ ಮುಖ ಬೆಲೆ ಬಾಳುವ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆಧರಿಸಿ ಆರೋಪಿಯನ್ನು ಬಂಧಿಸಿ 14 ಖೋಟಾ ನೋಟುಗಳು ಮತ್ತು  ಕೃತ್ಯಕ್ಕೆ ಬಳಸಿದ ಜೆರಾಕ್ಸ್ ಮೆಷಿನ್ ವಶಪಡಿಸಿಕೊಂಡಿರುತ್ತಾರೆ. ಮೂಲತಃ ಹರಿಹರದ ತರಕಾರಿ ಮಾರುಕಟ್ಟೆ ಹತ್ತಿರದ ನಿವಾಸಿಯಾಗಿದ್ದು ರಿಲಯನ್ಸ್ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ ನೂರು ರೂ ಮುಖ ಬೆಲೆ ಬಾಳುವ ಖೋಟಾ ಖೋಟಾನೋಟುಗಳನ್ನು ಎಲ್ಲಿಂದ ತಂದು ಚಲಾವಣೆ ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 
ದಾವಣಗೆರೆಯ ಗ್ರಾಮಾಂತರ ಉಪ ಅಧೀಕ್ಷಕರಾದ ನರಸಿಂಹ ವಿ ತಾಮ್ರಧ್ವಜ .ವೃತ್ತನಿರಕ್ಷಕ ಶಿವಪ್ರಸಾದ್ ಎಂ. ಇವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ ಐ ಸುನಿಲ್ ಬಸರವಾಜ್ ಇವರ ನೇತ್ರತ್ವದಲ್ಲಿ  ಎಎಸ್ಸೈ ಯಾಶಿನ್ಉಲ್ಲಾ ಪೊಲೀಸ್ ಪೇದೆಗಳಾದ ಎನ್ ಎಂ ದ್ವಾರಕೀಶ್. ಮಂಜುನಾಥ್ .ದೇವರಾಜ್. ಸಿದ್ದರಾಜು .ಟಿ ವಿ ಸತೀಶ್ .ನಾಗರಾಜ್ ಸುಣಗಾರ .ಶಿವಪದ್ಮ .ಖೋಟಾ ನೋಟು ಜಾಲ ಪ್ರಕರಣದ ತನಿಖೆಯಲ್ಲಿ ಇದ್ದರು