ಖೋಟಾ ನೋಟು ಚಲಾವಣೆಗೆ ಯತ್ನ:ವಿಜಯಪುರದಲ್ಲಿ ಇಬ್ಬರ ಬಂಧನ

ವಿಜಯಪುರ,ಸೆ.21-ನಗರದ ಗೋದಾವರಿ ಹೋಟೆಲ್ ಬಳಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಅನೀಲ ಭೀಮಪ್ಪ ಹರಿಜನ ಹಾಗೂ ನಗರದ ಸ್ಟಾರ್ ಕಾಲೋನಿ ನಿವಾಸಿ ಷಣ್ಮುಖ ಮಲ್ಲಪ್ಪ ಬಿದರಿ ಬಂಧಿತ ಆರೋಪಿಗಳು.
ಈ ಆರೋಪಿಗಳು 200 ಮುಖ ಬೆಲೆಯ 9 ನೋಟು ಮತ್ತು 100 ಮುಖ ಬೆಲೆಯ 2 ಖೋಟಾ ನೋಟಗಳನ್ನು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಗಾಂದಿ üಚೌಕ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.