ಖೋಖೋ ಟೂರ್ನಿ: ಸಿಐಟಿಗೆ ಪಾರಿತೋಷಕ

ತುಮಕೂರು, ಮೇ ೨೫- ಬೆಂಗಳೂರಿನ ಆರ್.ವಿ. ತಾಂತ್ರಿಕ ವಿದ್ಯಾಲಯದ ವತಿಯಿಂದ ನಡೆದ ರಾಜ್ಯ ಮಟ್ಟದ ಅಂತರ ತಾಂತ್ರಿಕ ವಿದ್ಯಾಲಯಗಳ ಖೋ ಖೋ ಪಂದ್ಯಾವಳಿಯಲ್ಲಿ ಮೊಮೆಂಟಮ್ ೨೪ ರೂಂ ಪಂದ್ಯಾವಳಿಯಲ್ಲಿ ತುಮಕೂರಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಖೋ ಖೋ ತಂಡ ಚಿನ್ನದ ಪದಕ ಮತ್ತು ಪಾರಿತೋಷಕ ಪಡೆದಿದೆ.
ರಾಜ್ಯದ ವಿವಿಧೆಡೆಯಿಂದ ಬಂದಿದ್ದ ತಂಡಗಳನ್ನು ಎಲ್ಲ ಹಂತಗಳಲ್ಲಿ ಸೋಲಿಸಿ ಫೈನಲ್ ಪಂದ್ಯದಲ್ಲಿ ಬಿಎಂಎಸ್ ತಾಂತ್ರಿಕ ವಿದ್ಯಾಲಯದ ತಂಡವನ್ನು ಮೂರು ಅಂಕಗಳ ಅಂತರದಿಂದ ಸೋಲಿಸಿ ಚನ್ನಬಸವೇಶ್ವರ ತಾಂತ್ರಿಕ ವಿದ್ಯಾಲಯ ಜಯಭೇರಿ ಬಾರಿಸಿದೆ.
ಪುನಿತ್ ಗೌಡ ಅವರ ನಾಯಕತ್ವದ ಖೋ ಖೋ ತಂಡದಲ್ಲಿ ವಿಶ್ವನಾಥ್‌ಗೌಡ ಉಪನಾಯಕ ಕೆ.ಪಿ ಗುಣಶೇಖರ್, ವಿನಯ್ ಎಲ್. ಅರಸು, ಪಿ. ಮಂಜುನಾಥ್, ಲಕ್ಷ್ಮೀಶ್‌ಗೌಡ, ಟಿ.ಎಸ್. ನಮೀತ್ ಮೊನೀಷಾ, ಯಶವಂತ್. ಎಚ್‌ಆರ್‌ಆರ್ ಶಶಿಧರ್, ಎಸ್ ಪುನೀತ್ ಗೌಡ, ಆರ್. ಮನೋಜ್, ಶಿವದರ್ಶನ್, ಎಸ್. ರಕ್ಷೀತ್, ಟಿ.ವೈ. ಚೇತನ್, ಎಚ್.ಆರ್. ಉಲ್ಲಾಸ್, ಆರ್. ಮನೋಜ್ ಮೊನೀಷ, ಪಿ.ವಿನೂತ್, ನಮೀನ್‌ಗೌಡ, ಸಿ.ಪಿ. ಯಶವಂತ, ಶಿವ ದರ್ಶನ ಒಳಗೊಂಡ ತಂಡದ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾದರು.
ಈ ತಂಡದ ಉಪನಾಯಕ ವಿಶ್ವನಾಥ್‌ಗೌಡ ಮತ್ತು ಮಂಜುನಾಥ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತಿದಾರರಾಗಿ ದೈಹಿಕ ಶಿಕ್ಷಣ ಉಪನ್ಯಾಸಕ ಡಾ ಜಗದೀಶ್ ನಿರ್ವಹಿಸಿದ್ದರು. ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸಿದ ತಂಡವನ್ನು ಸಿಐಟಿ ಕಾಲೇಜಿನ ನಿರ್ದೇಶಕ ಡಿ.ಎಸ್. ಸುರೇಶ್ ಹಾಗೂ ಕಾರ್ಯದರ್ಶಿ ಹಾಗೂ ಶಾಸಕ ಟ.ಗಣೇಶ್ ಅಭಿನಂದಿಸಿದ್ದಾರೆ.