ಖೋಖೊ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಆಶನಾಳ ವಿದ್ಯಾರ್ಥಿಗಳು

ಯಾದಗಿರ,ಸೆ.28- ಇದೇ 2023-24ರ ಯಾದಗಿರಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ. ವನಿತೆಯರು (ಬಾಲಕಿಯರು) ಖೋ ಖೋ ಆಟದಲ್ಲಿ ಆಶನಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಶನಾಳ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಸರ್, ದೈಹಿಕ ಶಿಕ್ಷಕರಾದ ಜಾವೀದ್ ಅಹಮದ್,ಸಹ ಶಿಕ್ಷಕರಾದ ದೇವಿಭದ್ರಪ್ಪ, ಮಲ್ಲೇಶ್, ನರಸಿಂಹ,ನಾಗಪ್ಪ ಸರ್, ಸಹ ಶಿಕ್ಷಕಿಯರಾದ ರಾಜೇಶ್ವರಿ ಮತ್ತು ಗಂಗಮ್ಮ,ಅತಿಥಿ ಶಿಕ್ಷಕರಾದ ರಾಮಣ್ಣ ಹಾಗೂ ಊರಿನ ಹಿರಿಯ ವಿದ್ಯಾರ್ಥಿಗಳಾದ,ಭೀಮರಾಯ, ಖಂಡಪ್ಪ,ಶಶಿ,ರಾಜು, ಹಣಮಂತ್ರಾಯ ಮತ್ತು ಊರಿನ ಯುವಕರು ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.