ಖೊಟ್ಟಿ ಮತದಾರರ ಹೆಸರು ಸೇರ್ಪಡೆ ತನಿಖೆಗೆ ಆಗ್ರಹ

ವಿಜಯಪುರ:ಮೇ.19: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ವಿಜಯಪುರ ನಗರ-30 ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ರವರ ನೇತೃತ್ವದಲ್ಲಿ ವಿಜಯಪುರ ನಗರ ಮತಕ್ಷೇತ್ರದಲ್ಲಿ ಖೊಟ್ಟಿ ಮತದಾರರ ಹೆಸರು ಸೇರ್ಪಡೆ ಹಾಗೂ ಖೊಟ್ಟಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ನ್ಯಾಯಾಂಗ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಘನತೆವೆತ್ತ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ, ಅಲ್ತಾಫ್ ಇಟಗಿ, ಆಸಿಫ್ ಶಾನವಾಲೆ, ಅಪ್ಪು ಪೂಜಾರಿ, ದಿನೇಶ್ ಹಳ್ಳಿ, ಜಮೀರ ಬಾಂಗಿ, ಮೈನುದ್ದೀನ ಬೀಳಗಿ, ವೈಜನಾಥ ಕರ್ಪೂರಮಠ, ಗಿರೀಶ್ ಇಟ್ಟಂಗಿ, ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಅಪ್ಜಲ್ ಜಾನವೆಕರ, ಸದ್ದಾಂ ಇನಾಮದಾರ, ಭಾರತಿ ಹೊಸಮನಿ, ರಾಜೇಶ್ವರಿ ಚೋಳಕೆ, ಆಸ್ಮಾ ಕಾಲೆಬಾಗ, ರೂಬಿನಾ ಹಳ್ಳೂರ, ಶಮಿಮ ಅಕ್ಕಲಕೋಟ, ಧನರಾಜ ಎ., ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ ಮುಂತಾದವರು ಉಪಸ್ಥಿತರಿದ್ದರು.