ಖೊಟ್ಟಿ ದಾಖಲೆ ಸೃಷ್ಟಿಸಿ ನೌಕರಿ ಗಿಟ್ಟಿಸಿಕೊಂಡ-ಶ್ರೀಧರ

ಗಬ್ಬೂರು.ನ.೨೦-ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುವ ಶ್ರೀಧರ ತಂದೆ ರಾಮಜಿ ಕ್ಲರ್ಕ್ ಕಂ ಗುಮಾಸ್ತ ಈತನು ಖೊಟ್ಟಿ ದಾಖಲೆ ಸೃಷ್ಟಿಸಿ ನೌಕರಿ ಗಿಟ್ಟಿಸಿಕೊಂಡಿದ್ದಾನೆ.
ಜಿಲ್ಲಾ ಪಂಚಾಯತ್ ವತಿಯಿಂದ ಅನುಮೋದನೆ ಪಡೆದು ಈಗ ಜೇಷ್ಠತ ಪಟ್ಟಿಗೆ ಸೇರಿಸಲು ದೇವದುರ್ಗ ಇಓ ಪಂಪಾಪತಿ ಹೀರೆಮಠ ಕಳಿಸಿರುವ ಶಿಫಾರಸ್ಸು ರದ್ದುಗೊಳಿಸಿ ಕೂಡಲೇ ಈತನ ಮೇಲೆ ೪೨೦ ಕೇಸ್ ದಾಖಲಿಸಿ ಕಾನೂನಿನ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕ ಅಧಿಕಾರಿಗೆ ದಲಿತ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬೊಮ್ಮನಾಳ ಅವರು ದೂರು ಸಲ್ಲಿಸಿದ್ದಾರೆ.
ಮಲದಕಲ್ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ಠರಾವು ಸೃಷ್ಟಿಸಿ ಮತ್ತು ಅಧ್ಯಕ್ಷ, ಸರ್ವ ಸದಸ್ಯರು ಹಾಗೂ ಹಿಂದಿನ ಪಿಡಿಓ ರಘುನಾಥ ನಕಲಿ ಸಹಿ ಮಾಡಿ, ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಿ ಅನುಮೋದನೆ ಪಡೆದಿರುತ್ತಾನೆ.
ಶ್ರೀಧರ ತಂದೆ ರಾಮಜಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರು ತಾಲೂಕಿನ ಮಾನಸಿಂಗ್ ನಾಯಕ್ ತಾಂಡದವನಾಗಿದ್ದು, ಮಲದಕಲ್ ನಿವಾಸಿ ಎಂದು ಜಾತಿ, ಆದಾಯ, ವಾಸಸ್ಥಳ ಸೃಷ್ಟಿಸಿ ಮಲದಕಲ್ ಗ್ರಾಮದವನೇ ಎಂದು ದಾಖಲೆಗಳನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿದ್ದಾನೆ. ಇವನಿಗೆ ಈಗಿನ ಭ್ರಷ್ಟ ಪಿಡಿಓ ದೇವರಾಜ್ ಬೆನ್ನೆಲುಬಾಗಿ ನಿಂತಿದ್ದಾನೆ, ಕೂಡಲೇ ಇವನ ಮೇಲೆ ೪೨೦ ಕೇಸ್ ದಾಖಲಿಸಬೇಕು ಎಂದು ರಾಜು ಬೋಮ್ಮನಾಳ ಅವರು ಮನವಿ ಪತ್ರದ ಮೂಲಕ ಆಗ್ರಹಿಸಿದರು.