ಖೊಖೊ : ಜಿಲ್ಲಾ ಮಟ್ಟಕ್ಕೆ ಆಯ್ಕೆ

ಔರಾದ :ಸೆ.14: ತಾಲೂಕಿನ ಕೌಡಗಾಂವ ಸರಕಾರಿ ಪ್ರೌಢಶಾಲೆ ಬಾಲಕರ ತಂಡ ಖೊಖೊ ಆಟದಲ್ಲಿ ತಾಲ್ಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಔರಾದ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 2023-24 ನೇ ಸಾಲಿನ ಇಲಾಖೆ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಕೌಡಗಾoವ್ ಬಾಲಕರ ತಂಡ ಖೊಖೊ ಕ್ರೀಡೆಯಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮಕ್ಕಳ ಸಾಧನೆಗೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಗುರುನಾಥ ಕುಸುಮರೆ, ಮುಖ್ಯ ಗುರು ಬಾಲಿಕಾ ಮೆಹಕರ, ಶಿಕ್ಷಕರಾದ ಸತೀಶ ಬಿರಾದಾರ, ವಿಜಯಕುಮಾರ, ಬಸವರಾಜ, ಸತೀಶ, ಎಂ ಕೃತಿಕಾ, ದೀಪಾರಾಣಿ, ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ರೆಡ್ಡಿ ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.