ಖೈಮರಾಗೆ ಉಪ್ಪಿ ಹಸಿರು ನಿಶಾನೆ ಫಸ್ಟ್ ಲುಕ್ ಅನಾವರಣ

  • ಚಿಕ್ಕನೆಟಕುಂಟೆ ಜಿ.ರಮೇಶ್

ಸಸ್ಪೆನ್ಸ್, ಥ್ರಿಲ್ಲರ್ , ಹಾರಾರ್ ಕಥಾಹಂದರ ಹೊಂದಿರುವ “ಖೈಮರಾ” ಚಿತ್ರದ ಫಸ್ಟ್ ‌ಲುಕ್ ಅನಾವರಣಗೊಂಡಿದೆ.
ನಟಿ ಪ್ರಿಯಾಂಕಾ ಉಪೇಂದ್ರ ಅವರ ಹುಟ್ಟುಹಬ್ಬಕ್ಕೂ ಮುನ್ನ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡುವ ಹುಟ್ಟುಹಬ್ಬದ ಉಡುಗೊರೆ‌ ನೀಡಿತ್ತು.
ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಹಾಗೂ ಛಾಯಾಸಿಂಗ್ ಜೊತೆ ನಿರ್ಮಾಪಕ ಮತಿಯಲಗಾನ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಕಥೆ ಕೇಳಿದ್ದೀನಿ.‌ ಚಿತ್ರದ ಫಸ್ಟ್ ಲುಕ್ ಸೂಪರಾಗಿದೆ. ಚಿತ್ರವನ್ನು ಇದೇ ರೀತಿ‌ ಮಾಡಿ‌.‌ ಇಡೀ ತಂಡಕ್ಕೆ ಒಳೆಯದಾಗಲಿ ಎಂದು ಶುಭಕೋರಿದರು.
ಹಿರಿಯ ನಿರ್ದೇಶಕ ಪಿ.ವಾಸು ಸಹೋದರ ಪಿ. ವಿಮಲ್ ಪುತ್ರ ಗೌತಮ್ ವಿ.ಪಿ ಈ ಚಿತ್ರದ ನಿರ್ದೇಶಕರು. ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕೊಡಗಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಗೌತಮ್, ಮಾಹಿತಿ ಹಂಚಿಕೊಂಡರು.


ನಟಿ ಪ್ರಿಯಾಂಕಾ ಉಪೇಂದ್ರ ,ನಿರ್ದೇಶಕ ಗೌತಮ್ ಹೇಳಿದ ಕಥೆ ಇಷ್ಟವಾಯಿತು. ಪ್ರಿಯಾಮಣಿ ಹಾಗೂ ಛಾಯಾಸಿಂಗ್ ಅವರೊಡನೆ ಚಿತ್ರದಲ್ಲಿ ‌ನಟಿಸುತ್ತಿರುವುದು ಸಂತಸ ತಂದಿದೆ ಎಂದರು.
ಮತ್ತೊಬ್ಬ ನಟಿ ಛಾಯಾಸಿಂಗ್,ಹಲವು ವರ್ಷಗಳ ನಂತರ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ..ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.
ನಿರ್ಮಾಪಕ ಮತಿಯಲಗಾನ್ ಮಾತನಾಡಿ, ಅನುಭವಿ‌ ಕಲಾವಿದರೊಂದಿಗೆ ಅಭಿನಯಿಸುತ್ತಿರುವುದು ಸಂತಸ ತಂದಿದೆ ಎಂದರು.
ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಅದಕ್ಕೆ ಹೊಂದುವ ಸಂಗೀತ ನೀಡುತ್ತೇನೆ . ಪ್ರಿಯಾಂಕ ಉಪೇಂದ್ರ ನಟಿಸುತ್ತಿರುವ ಚಿತ್ರಕ್ಕೆ ಇಪ್ಪತ್ತು ವರ್ಷಗಳ ನಂತರ ಸಂಗೀತ ನೀಡುತ್ತಿದ್ದೇನೆ. ಅವರು ನಟಿಸಿದ್ದ ಮೊದಲ ಚಿತ್ರ ತೆಲುಗಿನ “ರಾ” ಗೆ ನಾನೆ ಸಂಗೀತ ನೀಡಿದ್ದೆ ಎಂದು ನೆನಪಿಸಿಕೊಂಡರು.
ಪ್ರಿಯಾಮಣಿ ಅವರು ಹೈದರಾಬಾದ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವುದರಿಂದ ವಿಡಿಯೋ ಮೂಲಕ ಅಭಿಪ್ರಾಯವನ್ನು ಹಂಚಿಕೊಂಡರು. ವಿಷ್ಣು ರಾಮಕೃಷ್ಣನ್ ಛಾಯಾಗ್ರಹಣವಿದೆ.

ಲೇಡಿ ಸೂಪರ್ ಸ್ಟಾರ್

ಖೈಮರಾ ಚಿತ್ರ ತಂಡದಿಂದ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ “ಲೇಡಿ ಮೆಗಾ ಸೂಪರ್ ಸ್ಟಾರ್” ಬಿರುದು ನೀಡಲಾಯಿತು