ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸನಲ್ಲಿ ಬಳ್ಳಾರಿ ವಿವಿಯ ಆದಿತ್ಯಗೆ ಬೆಳ್ಳಿಯ ಪದಕ:


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.26: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಸ್ತಿಪಟು ಆದಿತ್ಯ (ವೀರಶೈವ ಮಹಾವಿದ್ಯಾಲಯ ಬಳ್ಳಾರಿ) ನ್ಯಾಗಾಲಾಂಡ ಕೊಹಿಮಾದ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.22ರಿಂದ 25ರ ವರೆಗೆ ನಡೆದ ಖೇಲೊ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟ-2024 ಪುರುಷರ ಕುಸ್ತಿ (ಗ್ರೀಕೊ ರೋಮನ್ 87 ಕೆಜಿ) ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕವನ್ನು ಪಡೆಯುವುದರ ಮೂಲಕ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ. ತನ್ಮೂಲಕ ಕರ್ನಾಟಕ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿರುತ್ತಾನೆ ವಿ.ವಿ. ಪ್ರಕಟಣೆಯಲ್ಲಿ ತಿಳಿಸಿದೆ.