ಖೇಣಿ ಜಂಭುನಾಥ ನಿಧನ

ಬಳ್ಳಾರಿ 01 : ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು, ಎರಡು ಬಾರಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅಲ್ಲಂ ಕರಿಬಸಪ್ಪ ಎಂಬಿಎ ಕಾಲೇಜು ಮತ್ತು ಡಿಪ್ಲೊಮೋ ಕಾಲೇಜಿನ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ. ರಾಘವ ಮೆಮೋರಿಯಲ್ ಅಸೋಶಿಯೇಶನ್ ವೀಶೇಷ ಆಹ್ವಾನಿತರು ಮತ್ತು ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಮುಖ್ಯ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸಿದ್ದ ನಗರದ ಖೇಣಿ ಜಂಬುನಾಥ ಅವರು ಇಂದು ಬೆಳಿಗ್ಗೆ 9.50 ಕ್ಕೆ ನಿಧನರಾಗಿದ್ದಾರೆ.
ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಘು ಅಪಾರ ಬಂಧೂ ಬಳಗವನ್ನು ಅಗಲಿರುವ ಅವರಿಗೆ 85 ವರ್ಷ ವಯಸ್ಸಾಗಿತ್ತು.
ಸಂತಾಪ:
ಖೇಣಿ ಜಂಭುನಾಥ ಅವರ ನಿಧನಕ್ಕೆ ವೀ,ವಿ,ಸಂಘದ ಪದಾಧಿಕಾರಿಗಳು, ರಾಘವ ಮೆಮೋರಿಯಲ್ಲ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತ ಸದಸ್ಯರು ಮತ್ತು ಅಜೀವ ಸದಸ್ಯರು ಸಂತಾಪ ಸೂಚಿಸಿದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.