ಖುಷಿಯಿಂದ ಶಾಲೆಯತ್ತ ಮುಖ ಮಾಡಿದ ವಿಧ್ಯಾರ್ಥಿಗಳು

ಬಾಗೇಪಲ್ಲಿ, ಜ. ೨- ಇಂದುಪುನರಾರಂಭವಾದ ವಿದ್ಯಾಗಮ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಖುಷಿಯಿಂದ ಶಾಲೆಯತ್ತ ಮುಖ ಮಾಡಿದ್ದಾರೆ.
ಇದು ಕಾಣಿಸಿಕೊಂಡಿದ್ದು ಬಾಗೇಪಲ್ಲಿ ತಾಲ್ಲೂಕು ಸರ್ಕಾರಿ ಪ್ರೌಢಶಾಲೆ ಘಂಟಂವಾರಿಪಲ್ಲಿಯಲ್ಲಿ ಘಂಟಂವಾರಿಪಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನಿಯಮದಂತೆ ಪೋಷಕರ ಒಪ್ಪಿಗೆಯ ಮೇರೆಗೆ ವಿದ್ಯಾರ್ಥಿಗಳಿಗೆ ಅರ್ಧ ದಿನದ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಕೋವಿಡ್ ೧೯ರ ಮಾರ್ಗಸೂಚಿಗಳು, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಧರಿಸುವುದು, ಆಗಾಗ ಕೈಗಳ ಸ್ವಚತೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯು ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಸುರಕ್ಷಿತ ಎನ್ನುವುದನ್ನು ಮನದಟ್ಟು ಮಾಡಿಸಲಾಯಿತು.
ಮುಖ್ಯೋಪಾಧ್ಯಾಯರಾದ ರಾಮಸುಬ್ಬಮ್ಮ. ಜಿ ಮಾತನಾಡಿ ಶಿಕ್ಷಣ ಎಂದರೆ ಕೇವಲ ಜ್ಞಾನಾರ್ಜನೆ ಅಲ್ಲ, ವಿದ್ಯಾರ್ಥಿಗಳಿಗೆ ತಮ್ಮ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕ ಸಿದ್ಧತೆಯನ್ನು ಮಾಡುವುದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜವಾಬ್ದಾರಿಯನ್ನು ನಿಭಾಯಿಸುವ ಧೈರ್ಯ, ಸಾಮರ್ಥ್ಯವನ್ನು ಹೊಂದಬೇಕು. ಹೊಸ ವರುಷವು ಎಲ್ಲರಿಗೂ ಉತ್ತಮ ಆರೋಗ್ಯ, ಯಶಸ್ಸು, ಗುರಿ ಸಾಧನೆಯ ಮನೋಭಾವನೆ ಹಾಗೂ ಹೊಸತನವನ್ನು ಮೂಡಿಸಲಿ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ವರುಷದ ಶುಭಾಶಯ ಕೋರಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಎನ್.ಸಂಧ್ಯಾ,ಬಿರಾದಾರ ಚಂದ್ರಷಾ ವಿಠಲ್, ಎನ್.ಶ್ರೀನಿವಾಸ್, ಪಿ.ಎನ್.ನಾರಾಯಣ ಸ್ವಾಮಿ, ಸಿ.ಎನ್.ನಾರಾಯಣ ಸ್ವಾಮಿ, ಎಲ್.ರವಿ, ಶ್ರೀಮತಿ ವರಲಕ್ಷ್ಮೀ ಅನಿತಾ,ರಾಮಚಂದ್ರ ಎಸ್ ಡಿ.ಎಂ.ಸಿ.ಸದಸ್ಯರು ಹಾಜರಿದ್ದರು.