ಖುರ್ಚಿ ಉಳಿಸಿಕೊಳ್ಳಲು ಸಿದ್ದು, ಡಿಕೆಶಿ ಕಚ್ಚಾಟ

ಮೈಸೂರು: ವ.09- ಕಾಂಗ್ರೆಸ್ ನವರು ಮೊದಲು ಅವರ ನಡುವಿನ ಗೊಂದಲ ಬಗೆಹರಿಸಿಕೊಳ್ಳಲಿ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪ್ರಯತ್ನ ಪಡುತ್ತಿದ್ದರೆ, ಶಿವಕುಮಾರ್ ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಅವರು ಪ್ರಯತ್ನ ಪಡುತ್ತಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಅವರು ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಅವರು ಇಂದು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‍ಗೆ ಭೇಟಿ ನೀಡಿ ಸುದ್ಧಿಗಾರರೊಂದಿಗೆ ಮಾತನಾಡುತ್ತ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆಯೇ ಪರಸ್ಪರ ಉತ್ತಮ ಬಾಂಧವ್ಯ ಇಲ್ಲ. ಒಬ್ಬರಿಗೊಬ್ಬರು ಅಧಿಕಾರವನ್ನು ಕಿತ್ತುಕೊಳ್ಳಲು ಬಡಿದಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಈಗ ನಡೆದಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಸೇರಿದಂತೆ ನಾಲ್ಕು ವಿಧಾನಪರಿಷತ್ ಸ್ಥಾನಗಳಲ್ಲೂ ಕಾಂಗ್ರೆಸ್ ಸೋಲಬೇಕೆಂಬುದು ಅವರ ಪಕ್ಷಗಳ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ಕಾಯುತ್ತಿದೆ. ಕಾರಣ, ಸೋತ ಮೇಲೆ ಪರಸ್ಪರ ಒಬ್ಬರ ಮೇಲೊಬ್ಬರು ಸೋಲಿಗೆ ಕಾರಣೀಭೂತರು ಎಂದು ಆರೋಪಿಸಿ ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ಅವರ ಪಕ್ಷದಲ್ಲಿಯೇ ನಡೆಯುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಾವ ಅಪರೇಷನ್ ಕೂಡ ನಡೆದಿಲ್ಲ. ಹೋಗೋರು ಹೋಗ್ತಾರೆ ಬರೋರು ಬರ್ತಾರೆ. ಡಿಕೆಶಿ ಪಕ್ಷದಲ್ಲಿ ಬಿಟ್ಟು ಹೊರಗಡೆ ಹೋಗ್ತಾರಾಲ್ಲ. ಅವರನ್ನು ಅಪರೇಷನ್ ಮಾಡಿ ಸೇಫ್ಟಿ ಆಗಿ ಇಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.
ಎರಡೂ ಕ್ಷೇತ್ರದಲ್ಲಿ ಗೆಲುವು ನಮ್ಮದೇ
ಇದೇ ವೇಳೆ ಮಾಧ್ಯಮದವರ ಪ್ರಶ್ನೆಗೆ ನಾಳಿನ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿ 100ಕ್ಕೆ ನೂರು ಪರ್ಸೆಂಟ್ ನಾವೇ ಗೆಲ್ಲೋದು. ಅದರಲ್ಲಿ ಒಂದು ಪರ್ಸೆಂಟ್ ಕೂಡ ಡೌಟ್ ಇಲ್ಲ. ಈಗ ಆರ್ ಆರ್ ನಗರ ನಮ್ಮ ಪಕ್ಕದ ವಿಧಾನಸಭಾ ಕ್ಷೇತ್ರ. ನಾನೇ ಉಸ್ತುವಾರಿ. 10ದಿನ ಕೆಲಸ ಮಾಡಿದ್ದೇನೆ. ನಾಡಿ ಮಿಡಿತ ಗಮನಿಸಿದ್ದೇನೆ.ಮುನಿರತ್ನಂ ಒಳ್ಳೆ ಕೆಲಸ ಮಾಡಿದ್ದಾರೆ ಎನ್ನುವುದು ಎಲ್ಲರಲ್ಲಿಯೂ ಇದೆ. ಕೆಲವರು 50 ಪರ್ಸೆಂಟ್ ಪಕ್ಷ ನೋಡಲ್ಲ. ಇನ್ನು 50 ಪರ್ಸೆಂಟ್ ಯಾವ್ದಾದ್ರೂ ಆಗ್ಲಿ ಸರ್ ನಮ್ಮ ಪಕ್ಷ ಅಂತ ಹೇಳಿ ಬಿಜೆಪಿಗೆ ಮತ ಹಾಕ ತಕ್ಕಂತದ್ದಿದೆ. ಆದ್ದರಿಂದ ಅತ್ಯಧಿಕ ಮತದಿಂದ ನಾವು ಗೆಲ್ಲುತ್ತೇವೆ ಎಂದರು. ಕಾಂಗ್ರೆಸ್ ಕೂಡ ಎರಡು ಕಡೆಗಳಲ್ಲಿ ಬರತ್ತೆ ಅಂತ ಹೇಳಿ ಸಮೀಕ್ಷೆಗಳು ಹೇಳುತ್ತಿವೆ ಅನ್ನುತ್ತಿದ್ದಾರಲ್ಲ ಎಂದಿದ್ದಕ್ಕೆ ಕಾಂಗ್ರೇಸ್ ನವರಿಗೆ ಮಾಡಲು ಬೇರೆ ಕೆಲ್ಸ ಇಲ್ಲ. ಸಮೀಕ್ಷೆ ಯಾವ ಸಮೀಕ್ಷೆ ಹೇಳುತ್ತಿದೆ. ಅದರ ಪ್ರಕಾರನೇ ಮುನಿರತ್ನ ಮತ್ತು ಶಿರಾ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನತಕ್ಕಂತದ್ದು. ನಾವೇ ಖುದ್ದಾಗಿ ಕ್ಯಾನ್ವಾಸ್ ಮಾಡಿರೋದರಿಂದ ಪ್ರತಿ ನಾಡಿ ಮಿಡಿತ ಗೊತ್ತಿರೋದರಿಂದ ಹೇಳ್ತ . ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕ್ಯಾಬಿನೆಟ್ ವಿಸ್ತರಣೆ ಸಿಮ್ ಗೆ ಬಿಟ್ಟ ವಿಚಾರ
ಎಂ ಟಿಬಿ ನಾಗರಾಜ್ ಕೂಡ ನಾನು ಸಂಪುಟಕ್ಕೆ ಸೇರ್ಪಡೆ ಆಗ್ತೇನೆ ಅಂತ ಹೇಳಿದ್ದಾರೆಂದು ಕೇಳಿದ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾವು ಈಗ ಅದರ ಬಗ್ಗೆ ಮಾತಾಡಲ್ಲ. ಸಿಎಂ ಗೆ ಬಿಟ್ಟಿದ್ದು ಅವರಿಗೆ ಪರಮಾಧಿಕಾರ ಇರೋದು. ನಾವು ಹೇಳಬಹುದು. ಎಂ ಟಿಬಿ ನೋಡಿ, ಎಲ್ಲ ಇದಾರೆ ಅಂತ ಹೇಳಬಹುದೇ ವಿನಹ ಅಂತಿಮವಾಗಿ ಆದೇಶ ಮಾಡತಕ್ಕಂತದ್ದು , ಕ್ಯಾಬಿನೆಟ್ ಸೇರ್ಪಡೆ ಅಧಿಕಾರ ಸಿಎಂ ಗೆ ಬಿಟ್ಟಿದ್ದು ಎಂದರು.
ಸಿಎಂ ಬದಲಾವಣೆ ಆಗೇ ಆಗ್ತಾರೆ ಅಂತ ಸಿದ್ದು ಕಾನ್ಫಿಡೆಂಟ್ ನಿಂದ ಹೇಳ್ತಾರಲ್ಲ ಅಂದಿದ್ದಕ್ಕೆ ಏನಾಗಿದೆ ಅಂದರೆ ಸಿದ್ದರಾಮಯ್ಯ ತೆಗಿಬೇಕು ಅಂತ ಡಿಕೆಶಿವಕುಮಾರ್, ಡಿಕೆಶಿವಕುಮಾರ್ ತೆಗಿಬೇಕು ಅಂತ ಸಿದ್ದರಾಮಯ್ಯ, ಎರಡು ಚರ್ಚೆ ಆಗುವ ಸಂದರ್ಭ ಮರೆಮಾಚಲು ಇದನ್ನು ಹೇಳ್ತಿದ್ದಾರೆ. ನಮ್ಮ ಪಕ್ಷದ ತೀರ್ಮಾನ ನಾವು ಮಾಡ್ತೇವೆ. ಅವರನ್ನು ಬದಲಾವಣೆ ಮಾಡಬೇಕು ಅಂತ ಹೊರಟವರಲ್ಲ ಅದನ್ನು ಅವರು ಉಳಿಸಿಕೊಂಡ್ರೆ ಸಾಕು. ನೂರಕ್ಕೆ ನೂರು ಇಲ್ಲ ಎಂದು ಸ್ಪಷ್ಟಪಡಿಸಿದರು.