
ಬಾಬುಅಲಿ ಕರಿಗುಡ್ಡ
ದೇವದುರ್ಗ,ಮೇ.೨೬-
ಪರಿಸರ ಅಸಮತೋಲನ, ಕ್ರಿಮಿನಾಶ ಬಳಕೆ ಹಾಗೂ ಪ್ರಕೃತಿ ಹಾನಿಯಿಂದ ಜೀವಜಲ ಎಲ್ಲೆಡೆ ವಿಷವಾಗಿದೆ. ಆರೆ, ಪಟ್ಟಣದ ಎರಡು ಐತಿಹಾಸಿಕ ಬಾವಿಗಳು ಇಂದಿಗೂ ಪರಿಶುದ್ಧತೆ ಉಳಿಸಿಕೊಂಡಿದ್ದು ಜನರ ದಾಹ ನೀಗಿಸುತ್ತಿವೆ. ಇಲ್ಲಿನ ಜಲ ಶುದ್ಧ ಕುಡಿವ ನೀರಿನ ಘಟಕ ಮೀರಿಸುವಂತಿವೆ.
ಪಟ್ಟಣದ ಪೂರ್ವ ಮತ್ತು ಪಶ್ಚಿಮ ದಿಕ್ಕಿಗೆ ಇರುವ ಐತಿಹಾಸಿಕ ಖಾಸಬಾವಿ ಹಾಗೂ ಮಾವಿನಕೇರಿ ಬಾವಿಗಳು ಬೇಸಿಗೆಯಲ್ಲಿ ಬಡವರ ದಾಹ ನೀಗಿಸುತ್ತಿವೆ. ಆಳದ ಬಾವಿ, ಬೋರ್‌ವೆಲ್‌ಗಳು ಅಂತರ್ಜಲ ಕೊರತೆಯಿಂದ ಬತ್ತುತ್ತಿದ್ದರೆ ಈ ಬಾವಿಗಳಿಗೆ ಎಂಥ ಕಡುಬೇಸಿಗೆ ಬಂದರೂ ಜೀವಜಲ ಒರತೆಯಿಂತೆ ಸಂಗ್ರಹವಾಗಿರುತ್ತದೆ.
ಎರಡು ಬಾವಿಗಳು ಪಟ್ಟಣವನ್ನು ಎರಡು ಸಮಬಲ ಭಾಗವಾಗಿ ವಿಂಗಡಣೆ ಮಾಡಿದಂತಾಗಿದೆ. ಬಾಪೂಜಿ ಓಣಿಯಿಂದ ತೀಲಕ ಓಣಿ ವ್ಯಾಪ್ತಿಯ ೧೧ವಾರ್ಡ್ (ಗೌರಂಪೇಟ್ ಹೊರೆತು ಪಡೆಸಿ) ನಿವಾಸಿಗಳು ಖಾಸಬಾವಿ ನೀರು ಅವಲಂಬಿಸಿದ್ದಾರೆ. ಮೋಹಿನುದ್ಧಿನ್ ಕಾಲನಿಯಿಂದ ಅಬುಮೊಹಲ್ಲಾ ಓಣಿವರೆಗೆ ಉಳಿದ ೧೧ವಾರ್ಡಿನ ನಿವಾಸಿಗಳು ಮಾವಿನಕೇರಿ ಬಾವಿನೀರು ಕುಡಿಯುತ್ತಾರೆ.
ದರ್ಬಾರ ಓಣಿಯ ಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಇರುವ ಖಾಸಬಾವಿ ನೀರು ಸಕ್ಕರೆಯ ಪಾಕ ಎಂದು ಹೆಸರುವಾಸಿಯಾಗಿದೆ. ಈ ನೀರನ್ನು ಸಾರಿಗೆ ಸಂಸ್ಥೆ ಸಿಬ್ಬಂದಿ ಹೆಚ್ಚಾಗಿ ಬಳಸುತ್ತಿದ್ದು ಕರ್ತವ್ಯದ ವೇಳೆ ಬೆಂಗಳೂರು, ಪುನಾದವರೆಗೆ ನೀರು ಕೊಂಡೊಯ್ಯುತ್ತಾರೆ. ಬೆಟ್ಟಪ್ಪ ದೊರೆ ಆಡಳಿತದಲ್ಲಿ ಬಾವಿ ಹಗೆಯಲಾಗಿದೆ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ.
ಇನ್ನು ಬೆಟ್ಟದಮಧ್ಯ ಭಾಗದಲ್ಲಿರುವ ಮಾವಿನಕೆರೆಬಾವಿ ಬಡವರ ಪಾಲಿನ ಶುದ್ಧ ಕುಡಿವ ನೀರಿನ ಘಟಕವಾಗಿದೆ. ಪಟ್ಟಣದ ಪಶ್ಚಿಮ ದಿಕ್ಕಿಗೆ ಬರುವ ಮಾವಿನಕೆರೆ ಬಾವಿ ಗುಡ್ಡಗಳ ನಡುವೆ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶದಲ್ಲಿದ್ದರೂ ಅಂತರ್ಜಲ ಕಡಿಮೆಯಾಗಿಲ್ಲ. ಇದು ಇತಿಹಾದಲ್ಲಿ ಎಂದೂ ಬತ್ತದ ಬಾವಿಯಾಗಿದ್ದು ಇಲ್ಲಿನ ನೀರು ಎಳೆನೀರಿನಷ್ಟೇ ಸಿಹಿಯಾಗಿವೆ.
ಎಲ್ಲ ಕಡೆ ಮೀನಿರಲ್ ವಾಟರ್ ಹೆಚ್ಚಾಗಿ ಬಳಸಲಾಗುತ್ತಿದ್ದು ನಾಯಿಕೊಡೆಯಂತೆ ಶುದ್ಧ ಕುಡಿವ ನೀರಿನ ಘಟಕ ಆರಂಭವಾಗಿವೆ. ಕೆಮಿಕಲ್ ಮಿಶ್ರಿತ ನೀರು ಮಾರಾಟ ಮಾಡಲಾಗುತ್ತಿದೆ. ಆದರೆ ಎರಡು ಬಾವಿಯ ನೀರು ಪರಿಶುದ್ಧವಾಗಿದ್ದು ಬಡವರಿಗೆ ಅನುಕೂಲವಾಗಿವೆ. ಬೆಳಗ್ಗೆ ೫ಗಂಟೆಯಿಂದ ಸಂಜೆ೭ಗಂಟೆವರೆಗೆ ಜನರು ನೀರು ತರುತ್ತಾರೆ. ಇನ್ನು ಕೆಲವರು ಅಲ್ಲಿಂದ ನೀರು ತಂದು ಮಾರಾಟ ಮಾಡುತ್ತಿದ್ದು ೧೦ರೂ.ಗೆ ಒಂದು ಕೊಡದಂಡೆ ಸೇಲ್ ಆಗುತ್ತಿವೆ.
ಬಾಕ್ಸ್========
ದೈವದ ಸೆಲೆ
ಪರಿಸರ ನಾಶದಿಂದ ಅಂತರ್ಜಲ ಕೂಡ ವಿಷಯವಾಗಿದ್ದು ಎಲ್ಲೆಡೆ ಅಶುದ್ ನೀರು ದೊರೆಯುತ್ತಿದೆ. ಹಲವು ಕಡೆ ಅರ್ಸೇನಿಕ್ ಹಾಗೂ ಪ್ಲೋರೈಡ್ ಯುಕ್ತ ನೀರು ಸಿಗುತ್ತಿದೆ. ಈ ನೀರಿನಿಂದ ಕಂದುಹಲ್ಲು, ಮೂಳೆ ಸೆಳೆತ, ಕೈಕಾಲು ಬೇನೆ ಕಾಣಿಸಿಕೊಳ್ಳುತ್ತದೆ. ಆದರೆ, ಕಾಸಬಾವಿ ಹಾಗೂ ಮಾವಿನಕೆರೆ ಬಾವಿ ನೀರು ಪರಿಶುದ್ಧವಾಗಿದ್ದು ತಂಪಿನಿಂದ ಕೂಡಿವೆ. ಕಾಸಬಾವಿ ಬಳಿ ಗೋಪಾಲಸ್ವಾಮಿ ದೇವಸ್ಥಾನ, ಮಾವಿನಕೆರೆ ಬಾವಿ ಸಮೀತ ಚಂದಕೆರೆ ಸೇರಿ ಐತಿಹಾಸಿಕ ಸ್ಥಳಗಳಿವೆ. ಹೀಗಾಗಿ ಈ ಬಾವಿ ನೀರಿಗೆ ದೈವದ ಸೆಲೆಯಿದೆ ಎಂಬುದು ಜನರ ನಂಬಿಕೆಯಾಗಿದೆ.
ಕೋಟ್========
ಐತಿಹಾಸಿಕ ಕಾಸಬಾವಿ ಹಾಗೂ ಮಾವಿನಕೆರೆ ಬಾವಿ ಪಟ್ಟಣದ ಜನರ ದಾಹ ನೀಗಿಸುತ್ತಿವೆ. ಇಲ್ಲಿನ ನೀರು ನೈಸರ್ಗಿಕ ಪರಿಶುದ್ಧವಾಗಿದ್ದು, ಆರ್‌ಒ ಪ್ಲಾಂಟ್ ನೀರಿಗಿಂತ ರುಚಿಯಾಗಿವೆ. ಬಡವರಿಗೆ ಈ ಬಾವಿಗಳು ಆಸರೆಯಾಗಿವೆ. ಕಾಸಬಾವಿ ತಡೆಗೋಡೆ ಕುಸಿದಿದ್ದು ಸುತ್ತಲೂ ಗಿಡಗಂಟೆಬೆಳೆದು ನೀರು ಮಲಿನವಾಗುತ್ತಿವೆ. ಪುರಸಭೆಬಾವಿ ಸ್ವಚ್ಛತೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕಿದೆ.
| ಎಚ್.ಶಿವರಾಜ್
ಕಸಾಪ ತಾಲೂಕು ಅಧ್ಯಕ್ಷ
೨೬ಡಿವಿಡಿ೧
೨೬ಡಿವಿಡಿ೨