ಖಾಸಗೀ ಆಸ್ಪತ್ರೆಗಳಲ್ಲಿ ಲಸಿಕೆಗಳ ದರ ನಿಗಧಿ

ನವದೆಹಲಿ, ಜೂ‌8- ದೇಶದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನೋ ಸೋಂಕಿಗೆ ನೀಡುವ ಲಸಿಕೆಗಳ ದರವನ್ನು ಜಿಎಸ್ ಟಿ ಸೇರಿದಂತೆ ಕೇಂದ್ರ ಸರ್ಕಾರ ಇಂದು ನಿಗಧಿ ಮಾಡಿದೆ.

ಕೇಂದ್ರ ಸರ್ಕಾರ ನಿಗದಿ ಮಾಡಿದ ಅದಕ್ಕಿಂತ ಹೆಚ್ಚಿಗೆ ತೆಗೆದುಕೊಳ್ಳದಂತೆ ಖಾಸಗೀ ಆಸ್ಪತ್ರೆಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಖಾಸಗಿ ಆಸ್ಪತ್ರೆಗಳು ನೀಡುವ ಲಸಿಕಾ ದರವನ್ನು ಇಂತಿಷ್ಟೇ ಎಂದು ನಿಗದಿಪಡಿಸಿ ಇಂದು ಆದೇಶಿಸಿದೆ.

ಕೇಂದ್ರ ಸರ್ಕಾರ ನಿಗದಿಪಡಿಸಿರುವ 150 ರೂಪಾಯಿ ಸೇವಾ ಶುಲ್ಕ, ಜಿಎಸ್ ಟಿ ಸೇರಿದಂತೆ ಒಟ್ಟಾರೆಯಾಗಿ ಪ್ರತಿಭೆಗೆ ದರ ನಿಗದಿ ಮಾಡಲಾಗಿದೆ

ಕೋವಿಶೀಲ್ಡ್ ಪ್ರತಿ ಡೊಸ್ – 780 ರೂಪಾಯಿ

ಕೋವಾಕ್ಸಿನ್ ಪ್ರತಿ ವಯಲ್ಸ್ – 1410 ರೂ.

ಸ್ಪುಟ್ನಿಕ್ – ವಿ ಪ್ರತಿ ಡೋಸ್ – 1145 ರೂ.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ದರದ ಹಿನ್ನೆಲೆಯಲ್ಲಿ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ತಮಗೆ ಬೇಕಾದಂತೆ ಬೇಕಾಗುತ್ತಿದ್ದರು ನಿಗದಿ ಮಾಡುವಂತಿಲ್ಲ. ಕೇಂದ್ರ ಸರ್ಕಾರ ನಿಗಧಿ ಮಾಡಿರುವ ದರದಲ್ಲಿ ಲಸಿಕೆಯನ್ನು ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ

ಪ್ರತಿದಿನ ದರ ಪರಿಶೀಲನೆ:

ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 25ರಷ್ಟು ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಲಸಿಕೆ ಗಳಿಗೆ ದರ ನಿಗದಿ ಮಾಡಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಅಧಾರದಲ್ಲಿ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ನೀಡುತ್ತಿದ್ದವು ಅಥವಾ ಇಲ್ಲವೋ ಎನ್ನುವುದನ್ನು ಪ್ರತಿದಿನ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರ ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಲಸಿಕೆ, – ದರ, -ಜಿಎಸ್ಟಿ, -ಸೇವಾ ಶುಲ್ಕ – ‌ ಒಟ್ಟು ದರ
ಕೋವಿಶೀಲ್ಡ್- 600 ರೂ, 30 , 150 , 780 ರೂ.
ಕೋವಾಕ್ಸಿನ್- 1200ರೂ, 60, 150, 1410 ರೂ.
ಸ್ಪುಟ್ನಿಕ್ – ವಿ ಮ 948ರೂ, 47, 150, 1145 ರೂ.