
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,2- ಹಂಪಿ ಶುಗರ್ಸ್ ಅವರು ಎಥೆನಾಲ್ ಕಾರ್ಖಾನೆ ಸ್ಥಾಪಿಸಲು ಭೂಮಿ ಮಂಜೂರು ಮಾಡಿರುವ ಆದೇಶವನ್ನು ಸ್ಥಗಿತಗೊಳಿಸಬೇಕೆಂದು ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕು ಜಂಭುನಾಥಹಳ್ಳಿ ಗ್ರಾಮದ ಸರ್ವೆ ನಂ. 11/1 ಹಾಗೂ ಇತರೆ ಸರ್ವೆ ನಂಬಗಳ ಒಟ್ಟು 84 ಎಕರೆ ಜಮೀನನ್ನು ಹಂಪಿ ಶುಗರ್ಸ್ ಖಾಸಗಿ ಕಂಪನಿಗೆ ತರಾತುರಿಯಲ್ಲಿ ಮಂಜೂರಾತಿ ಮಾಡಲಾಗಿರುತ್ತದೆ.
ಸದರಿ ಜಂಬುನಾಥಹಳ್ಳಿ ಗ್ರಾಮದ ಜಮೀನಿನ ಭೂ ಭಾಗವು ಹೊಸಪೇಟೆ ನಗರಸಭೆ ವ್ಯಾಪ್ತಿಗೆ ಸೇರಿದ್ದು, ಈ ಜಮೀನಿನ ಬೆಲೆ ಮಾರುಕಟ್ಟೆಯಲ್ಲಿ ಪ್ರಸಕ್ತವಾಗಿ ಪತಿ ಎಕರೆಗೆ ಸುಮಾರು ರೂ. 20 ಕೋಟಿಗಳಷ್ಟಿದ್ದು, ಕೇವಲ ಮಾರ್ಗಸೂಚಿ ದರ ಆಳವಡಿಸಿಕೊಂಡು, ಭೂ ಪರಿವರ್ತನ ಶುಲ್ಕ: ಪಾವತಿಸಿಕೊಳ್ಳದೇ, ಸುಮಾರು 13ರಿಂದ 14 ಕೋಟಿ ರೂಪಾಯಿಗಳಿಗೆ 84.86 ಎಕರೆ ಮಾರಾಟ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಸುಮಾರು ರೂ. 150 ಕೋಟಿಗಳಷ್ಟು ನಷ್ಟವಾಗಲಿದೆ.
ಆದ್ದರಿಂದ ಭೂ ಮಂಜೂರಾತಿಯ ಎರಡು ಆದೇಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಿ, ಮತ್ತೊಮ್ಮೆ ವೈಜ್ಞಾನಿಕವಾಗಿ ಸಂಪೂರ್ಣ ಕಡತವನ್ನು ಮರುಪರಿಶೀಲಿಸಬೇಕಾಗಿ ಹಾಗೂ ಈ ಭೂಮಿಯನ್ನು ವಸತಿ ರಹಿತ ಬಡ ಜನರಿಗೆ ವಸತಿಗಳನ್ನು ಮಂಜೂರು ಮಾಡಿಕೊಡಬೇಕಾಗಿ ಕೋರಿದ್ದಾರೆ.
ಮೇಲ್ನೋಟಕ್ಕೆ ಇದ್ದು ಸರಿ ಎನಿಸಿದರೂ. ಆಂತರಿಕವಾಗಿ ಸರ್ಕಾರ ಬದಲಾಗಿದ್ದರಿಂದ ಹೊಸಪೇಟೆಯಲ್ಲಿ ದ್ವೇಷದ ರಾಜಕೀಯಕ್ಕೆ ನಾಂದಿ ಹಾಡಿದಂತೆ ಕಾಣುತ್ತಿದೆ.
ಈ ಹಿಂದಿನ ಶಾಸಕ ಆನಂದ್ ಸಿಂಗ್ ಸಕ್ಕರೆ ಕಾರ್ಖಾನೆಗೆ ಜಾಗ ಮಂಜೂರು ಮಾಡಿಸಿದ್ರು. ಹಾಲಿ ಶಾಸಕ ಗವಿಯಪ್ಪ ಅವತು ಅದನ್ನು ರದ್ದು ಮಾಡಿಸಲು ಪತ್ರ ಬರೆದಿದ್ದಾರೆ.
ಕೋಟ್ಯಾಂತರ ಬೆಲೆ ಭೂಮಿಯನ್ನು ಸಕ್ಕರೆ ಕಾರ್ಖಾನೆಗೆ ನೀಡೋದು ಬೇಡ ನಿವೇಶನ ಮಾಡಿ ಎನ್ನುತ್ತಿದ್ದಾರೆ ಶಾಸಕ ಗವಿಯಪ್ಪ.
ಖಾಸಗಿಯವರು ಪ್ರಾರಂಭಿಸಲು ಉದ್ದೇಶಿಸಿರೋ ಹಂಪಿ ಶುಗರ್ಸ್ ಕಾರ್ಖಾನೆ ಸ್ಥಾಪನೆಗೆ ಮೀಸಲಿಟ್ಟ ಸ್ಥಳದಲ್ಲಿ ಸೈಟ್ ಮಾಡಬೇಕು ಎಂದು ಗವಿಯಪ್ಪ ಪತ್ರ ಬರೆದಿರೋ ಹಿನ್ನಲೆ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಚಾರ ಈಗ ನೆನೆಗುದಿಗೆ ಬಿದ್ದಿದೆ.
ರೈತರಿಗೆ ಅನುಕೂಲವಾಗಲು ಸಕ್ಕರೆ ಕಾರ್ಖಾನೆ ಇಲ್ಲಿ ಆರಂಭಿಸಲಿದೆಂದು ಜಮಿಜನು ಮಂಜೂರು ಮಾಡಿಸಿ ಪೂಜೆಮಾಡಿಸಿದ್ದ ಆನಂದ್ ಸಿಂಗ್ ಅವರ ಪ್ರಯತ್ನಕ್ಕೆ ಗವಿಯಪ್ಪ ಅಡ್ಡಿಯಾಗಲಿದೆ.
ಮುಂದೇನಾಗುತ್ತೋ ಕಾದು ನೋಡಬೇಕಿದೆ.