
ಹುಣಸೂರು, ಫೆ.27:-ಸರ್ಕಾರಗಳ ನಿರ್ಲಕ್ಯ ಹಾಗೂ ಪೋಷಕರ ಕಾಳಜಿ ಕೊರತೆಯಿಂದ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಉಳವಿಗೆ ಖಾಸಗಿ ಹಾಗೂ ಸರ್ಕಾರೆತರ ಸಂಸ್ಥೆಗಳ ಮುತುವರ್ಜಿ ಶ್ಲಾಘನಿಯಎಂದು ಶಾಸಕ ಹೆಚ್.ಪಿ.ಮಂಜುನಾಥ್ ಪ್ರಶಂಶಿಸಿದರು.
ತಾಲ್ಲೂಕಿನಗೌರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐ.ಟಿ.ಸಿ/ಎಂ.ಎಸ್.ಕೆ ಹಾಗೂ ಔಟ್‍ರೀಚ್ ಸಂಸ್ಥೆಯ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೇಕ್ ಶೌಚಾಲಯಗಳ ಕೀ ಹಸ್ತಾಂತರಕಾರ್ಯಕ್ರಮದಲ್ಲಿ ಮಾತನಾಡಿದಅವರುಇಂಥ ಸಂಸ್ಥೆಗಳು ತಮ್ಮ ಕಾಳಜಿಯಿಂದ ನಿರ್ಮಿಸುವ ಕಟ್ಟಡಗಳು ಸರ್ಕಾರಿಯೋಜನೆ ಕಾಮಾಗಾರಿಗಳಿಗಿಂತ ಗುಣಮಟ್ಟ ಹೊಂದಿರುವುದು ವಿಶೇಷ ಎಂದರು.
ಐಟಿಸಿ ಲಿಮಿಟೆಡ್ ಮ್ಯಾನೇಜರ್ ಚನ್ನವೀರೇಶ ಮಾತನಾಡಿ ನಮ್ಮ ಐಟಿಸಿ ಕಂಪನಿಯು ನಿವ್ವಳ ಲಾಭದಲ್ಲಿ ನಮ್ಮಕಾರ್ಯವ್ಯಾಪ್ತಿಯಲ್ಲಿಬರುವ ಪ್ರದೇಶಗಳ ನೈಸರ್ಗಿಕ ಸಂಪನ್ನೂಲಗಳ ರಕ್ಷಣೆಗಾಗಿ ಸಿ.ಎಸ್.ಆರ್ ಯೋಜನೆಯಡಿ ಸಾರ್ವಜನಿಕರಿಗೆ ಅನುಕೂಲಕರವಾದ ಕೆಲಸವನ್ನು ಔಟ್‍ರೀಚ್ ಸಂಸ್ಥೆಯ ಮೂಲಕ ನಾವು ಮಾಡುತ್ತಿದ್ದು, ಇದರ ಜೊತೆಗೆ ನೈರ್ಮಲ್ಯಕ್ಕೆ ಸಂಂಬಂಧಿಸಿದಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೊಸ್ಕರ ಹೈಟೆಕ್ ಶೌಚಾಲಯ, ಶುದ್ದಕುಡಿಯುವ ನೀರಿನ ಘಟಕ, ಕೈತೊಳೆಯುವ ಘಟಕ ಹಾಗೂ ಅಂಗನವಾಡಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಉತ್ತಮ ದರ್ಜೆಯ ಶೌಚಾಲಯ ಮತ್ತು ಶಾಲಾ ತಡೆಗೊಡೆಯಂತಜನಪರ ಕಾರ್ಯಗಳನ್ನು 2013 ರಿಂದಲ್ಲೂಜನರಿಗೊಸ್ಕರ ಕಾರ್ಯನಿರ್ವಹಿಸುತ್ತ ಬಂದಿರುತ್ತೇವೆಎಂದಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನರೀತಿಯಲ್ಲಿ ಸಾರ್ವಜನಿಕಕ್ಷೇತ್ರದಲ್ಲಿಔಟ್‍ರೀಚ್ ಸಂಸ್ಥೆಯ ಮೂಲಕ ಜನಪರ ಕೆಲಸಗಳನ್ನು ಮಾಡುತ್ತೇವೆಂದು ತಿಳಿಸಿದರು.
ಔಟ್‍ರೀಚ್ ಸಂಸ್ಥೆಯತರಬೇತಿ ಸಂಯೋಜಕ ಜಿ.ಎಸ್.ಜಗದೀಶ್ ಪ್ರಾಸ್ತಾವಿಕವಾಗಿ ಮಾನತನಾಡಿ ಇದುವರೆಗೂ ಹುಣಸೂರು ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತಿಕರಣ ಮಾಡಲು ಐಟಿಸಿ/ಎಂ.ಎಸ್.ಕೆ ಮೂಲಕ ಸುಮಾರು 41 ಶಾಲೆಗಳಿಗೆ ಹೈಟೆಕ್ ಶೌಚಾಲಯಗಳು, 32 ಹ್ಯಾಂಡ್ ವಾಶ್, 37 ಶುದ್ದಕುಡಿಯುವ ನೀರಿನ ಘಟಕಗಳು, 7 ಕಾಂಪೌಡ್ ವಾಲ್ ಹಾಗೂ 6 ಅಂಗನವಾಡಿಗಳಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಇದರಜೊತೆಗೆ ಹುಣಸೂರು ಮತ್ತು ಕೆ.ಆರ್.ನಗರ ಎರಡು ತಾಲ್ಲೂಕುಗಳಲ್ಲಿ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಕಾಪಾಡಲು ಘನ ತ್ಯಾಜ್ಯ ಮತ್ತು ದ್ರವತ್ಯಾಜ್ಯ ನಿರ್ವಹಣೆ ಮಾಡಲು ಐ.ಇ.ಸಿ ಚಟುವಟಿಕೆಗಳ ಮೂಲಕ ಸಾರ್ವಜನಿಕರಿಗೆ, ಗ್ರಾಮಪಂಚಾಯ್ತಿ ಸದಸ್ಯರುಗಳು, ಪಿ.ಡಿ.ಓಗಳು, ಸ್ವಚ್ಚಗಹಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರುಗಳು, ಮಹಿಳಾ ಸಂಘದ ಸದಸ್ಯರುಗಳಿಗೆ ಜಾಗೃತಿ ಮೂಡಿಸಿ ತಾಲ್ಲೂಕಿನ 41 ಗ್ರಾಮ ಪಂಚಾಯ್ತಿಗಳಲ್ಲಿ ಸುಮಾರು 24 ಗ್ರಾಮ ಪಂಚಾಯ್ತಿಗಳಲ್ಲಿ ಪ್ರತಿ ಮನೆಗಳ ಹತ್ತಿರ ಹೊಗಿ ಒಣ ಕಸ ಸಂಗ್ರಹಣೆ ಮಾಡುವಕಾರ್ಯ ಪ್ರಗತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕ್ರಮ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್, ಗ್ರಾ.ಪಂ. ಅಧ್ಯಕ್ಷ ವೀರಭಂದ್ರಸ್ವಾಮಿ, ಉಪಾಧ್ಯಕ್ಷೆಗೌರಮ್ಮ ಶಂಕರನಾಯಕ, ಸದಸ್ಯರಾದಗೋವಿಂದಶೆಟ್ಟಿ, ಪದಮ್ಮ, ವಕೀಲ ಹಾಗೂ ತಾಲ್ಲೂಕುಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ಪುಟ್ಟರಾಜು, ಪಿ.ಡಿ.ಒ. ನವೀನ್‍ಕುಮಾರ್, ಸಿ.ಆರ್.ಪಿ ಲೋಕೇಶ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿಜಯಶೆಟ್ಟಿ, ಔಟ್‍ರೀಚ್ ಸಂಸ್ಥೆಯ ನಂಜುಂಡಸ್ವಾಮಿ, ಪ್ರಶಾಂತ್, ಮಹೇಶ ಪ್ರಸಾದ, ಮಹದೇವ್, ಪ್ರಕಾಶ, ಹೆಮ್ಮಿಗೆ, ಕಣಗಾಲು, ಮಾಚಬಾಯನಹಳ್ಳಿ ಅಂಗನವಾಡಿ ಕಾರ್ಯಕರ್ತರು, ಶಾಲಾ ಮಕ್ಕಳು ಸೇರಿದಂತೆ 100 ಹೆಚ್ಚು ಸಾರ್ವಜನಿಕರು ಭಾಗವಹಿಸಿದರು