ಖಾಸಗಿ ಶಿಕ್ಷಣ ಸಂಸ್ಧೆ: ಸರಕಾರ ನೆರವಾಗಲಿ -ತಾಳಿಕಟ್ಟೆ

ದೇವದುರ್ಗ.ನ.೦೭- ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಹೊಡತಕ್ಕೆ ಸಿಲುಕಿ ನಲುಗುತ್ತಿರವ ಖಾಸಗಿ ಅನುದಾನ ರಹಿತ ಶಾಲೆಗಳ ನೆರವಿಗೆ ಸರ್ಕಾರದ ಹಾಗೂ ಶಿಕ್ಷಣ ಸಚಿವರು ಧಾವಿಸುವುದು, ಸರ್ಕಾರದ ಕರ್ತವ್ಯವಾಗಿದೆ. ಆದರೆ ಸರ್ಕಾರ ಮತ್ತು ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಮೇಲಿಂದ ಮೇಲೆ ದುಡಿಕಿನ ನಿರ್ಣಯಗಳನ್ನು ಕೈಕೊಳ್ಳತ್ತಾ ಖಾಸಗಿ ಶಾಲಾ ಸಂಸ್ಧೆಗಳಿಗೆ ಬರಸಿಡಲು ಬಡದಂತಾಗಿದೆ ಎಂದು ರಾಜ್ಯ ಖಾಸಗಿ ಶಿಕ್ಷಣ ಸಂಸ್ಧೆಗಳ ರಾಜ್ಯ ಅಧ್ಯಕ್ಷ ಲೋಕೇಶ ತಾಳಿಕಟ್ಟೆ ಹೇಳಿದರು.
ಅವರು ಪಟ್ಟಣದ ರಾಯಚೂರು ರಸ್ತೆ ಮಾರ್ಗ ಮಧ್ಯ ಇರುವ ಎಸ್‌ಎಂಎಸ್, ಖಾಸಗಿ ಶಿಕ್ಷಣ ಸಂಸ್ಧೆಯಲ್ಲಿ ಸುದ್ದಿಗೋಪ್ಠಿ ಉದ್ದೇಶಿಸಿ ಶನಿವಾರ ಮಾತನಾಡಿದರು.
ಸರ್ಕಾರ ಖಾಸಗಿ ಎಂದು ಭೇಧಬಾವ ಮಾಡುವುದು ಸರಿಯಲ್ಲ ಕೊರೊನಾ ಮಾಹಾಮಾರಿ ಆಷ್ಟೇ ಅಲ್ಲದೇ, ಇತಿಹಾಸದುಕ್ಕೊ, ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಲೆ ಬಂದಿವೆ. ಸದ್ಯ ಶಿಕ್ಷಣ ಕ್ಷೇತ್ರ ಅನ್‌ಲಾಕ್ ನಂತರವೊ ಚೇತರಿಕೆ ಕಾಣದಿರುವುದು ಸರ್ಕಾರದ ಬಗ್ಗೆ ಕಳವಳ ಮೂಡುತ್ತದೆ. ಖಾಸಗಿ ಕಾರ್ಯ ನಿರ್ವವಹಿಸುವ ಶಿಕ್ಷಕರು ಉಪಜೀವನಕ್ಕೆ ಪರದಾಡುವಂಥ ಸ್ಧಿತಿ ನಿರ್ಮಾಣವಾಗಿದೆ.
ಆದರೂ ಸರ್ಕಾರ ಕನಿಷ್ಠ ಒಂದು ಆರ್ಥಿಕ ನೆರವು ಘೋಷಣೆ ಮಾಡದಿರುವುದು ಖಂಡನೀಯ. ಮೊದಲು ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷ, ಸಿಲೆಬಸ್‌ಗಳ ನಿರ್ದಿಷ್ಠ ಮಾರ್ಗಸೂಚಿ ಬಿಡಗಡೆಗೊಳ್ಳಸಲಿ ಎಂದರು. ಕೊರೊನಾದಿಂದ ಬೇಸತ್ತಿರುವ ಖಾಸಗಿ ಶಿಕ್ಷಣ ಸಂಸ್ಧೆಗಳ ಮೇಲೆ ಬಲ ಪ್ರಹಾರ ಮಾಡುವುದು ಸರಿಯಲ್ಲ.ಬೇಡಿಕೆಗಳನ್ನು ಈಡೇರಿಸದಿದ್ದರೆ.ರಾಜ್ಯದ್ಯಂತ ಪ್ರತಿಭಟನೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ರಾಜ್ಯನೆಯ ಪ್ರಧಾನ ಕಾರ್ಯದರ್ಶಿ ಮಾತನಾಡಿ. ಕೊರೊನಾ ಸಾಂಕ್ರಾಮಿಕದಿಂದ ಖಾಸಗಿ ಶಿಕ್ಷಣ ಸಂಸ್ಧೆಗಳು ಶಾಲೆಗಳು ಅನೇಕ ರೀತಿಯ ಸಮಸ್ಯೆಗಳು ಎದರುಸುತ್ತವೆ.ಸರ್ಕಾರ ಖಾಸಗಿ ಶಿಕ್ಷಣ ಸಂಸ್ಧೆಗಳ ಮಾನ್ಯತೆ ನವೀಕರಣವನ್ನು ವನ್ನು ಕೈಬಿಟ್ಟು ಮುಂದಿನ ಐದುವರ್ಷವರಿಗೆ ನೀಡಬೇಕು.ಖಾಸಗಿ ಶಾಲಾ ವಾಹನಗಳು ಹಾಗೂ ಕಟ್ಟಡ ಸಾಲಗಳನ್ನು ಮರುಪಾವತಿ ಕಂತುಗಳನ್ನು ಭರಿಸಲು ಒಂದು ವರ್ಷದ ವರೆಗೆ ವಿನಾಯತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೊಪ್ಸಾ ಸಂಘಟನೆ ರಾಜ್ಯ ಉಪಧ್ಯಾಕ್ಷೆ ಉಮಾ ಪ್ರಭಾಕರ್, ಸಹ ಕಾರ್ಯದರ್ಶಿ ಕೊಟ್ರೇಶ, ರಂಗನಾಥ ಬಿ,ಎಸ್, ಜಿ,ಎಂ,ಶಿವಕುಮಾರ, ಹರವಿ, ಜಯದೇವ ಮೆಣಸಗಿ ಎಂ,ಪಿ ಸೋನಾರ್ ಎ,ಎಮ್ ಧಾಲಾಯಕ್,ವಿನಯ ಎಸ್,ಪಾಟೀಲ್,

ಸೇರಿದಂತೆ ಇತರರು ಇದ್ದರು.