ಖಾಸಗಿ ಶಿಕ್ಷಣ ಸಂಸ್ಥೆ – ಸಿಬ್ಬಂದಿಗೆ ಕಿಟ್ ವಿತರಣೆ

ರಾಯಚೂರು.ಜೂ.೦೮- ಖಾಸಗಿ ಶಿಕ್ಷಣ ಸಂಸ್ಥೆಯ ಸಂಘದ ವತಿಯಿಂದ ಶಿಕ್ಷಕರಿಗೆ ಕಿಟ್ ವಿತರಿಸಲಾಯಿತು.
ಕಳೆದ ಒಂದು ತಿಂಗಳಿಂದ ಈ ರೀತಿ ಕಿಟ್ ಶಿಕ್ಷಕರಿಗೆ ನೀಡುವ ಮೂಲಕ ಅವರಿಗೆ ಕೊರೊನಾ ಸಂಕಷ್ಟದಲ್ಲಿ ನೆರವಾಗಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ಸಂಘದಿಂದ ಕಿಟ್ ವಿತರಿಸಲಾಗುತ್ತಿದೆಂದು ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ಎಸ್.ರಾಜು ಅವರು ಹೇಳಿದರು. ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಅಗತ್ಯಕ್ಕನುಗುಣವಾಗಿ ಮುಂದೆಯೂ ನೆರವು ನೀಡಲಾಗುತ್ತದೆಂದು ಹೇಳಿದರು.