ಸಿಂಧನೂರು,ಸೆ.೨೭- ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅಕ್ಟೋಬರ್ ೨ (ಗಾಂಧಿ ಜಯಂತಿ)ರಂದು ಸಿಂದನೂರು ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಈ ಬಾರಿ ’ಶಿಕ್ಷಕರ ದಿನಾಚರಣೆ’ ಹಮ್ಮಿಕೊಳ್ಳಲಾಗಿದೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲುಕ ಅದ್ಯಕ್ಷ ವಾಯ್ .ನರೇಂದ್ರ ನಾಥ ತಿಳಿಸಿದರು.
ನಗರದ ದುದ್ದುಪುಡಿ ಮಹಿಳಾ ಕಾಲೇಜಿನಲ್ಲಿ ಕರೆದ ಸುದ್ದಿಗೊಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳು ಕೊವಿಡ್ ಕಾರಣದಿಂದ ಮೂರು ವರ್ಷಗಳಿಂದ ಬಿಟ್ಟಿದ್ದ ಶಿಕ್ಷಕರ ಜಯಂತಿ ಆಚರಣೆ ಕಾರ್ಯಕ್ರಮ ವನ್ನು ಈ ಬಾರಿ ನಗರದ ಸತ್ಯ ಗಾರ್ಡನ್ ನಲ್ಲಿ ಅಕ್ಟೋಬರ್ ೨ ರಂದು ಸಂಜೆ ೩-೦೦ ಗಂಟೆಗೆ ಮಾಡಲು ನಿರ್ಧರಿಸಿದ್ದು ,ಅದಕ್ಕಾಗಿ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಕಲ ಆಡಳಿತ ಮಂಡಳಿ ಸನ್ನದ್ದರಾಗಿ ಕಾರ್ಯಕ್ರಮ ಯಶಸ್ಸುಗೆ ಸಹಕರಿಸಬೇಕಾಗಿದೆ.ಪ್ರಾಥಮಿಕ ,ಪ್ರೌಢ ,ಪದವಿ ಪೂರ್ವ, ಪದವಿ ಶಾಲಾ – ಕಾಲೇಜು ಪ್ರತಿ ಸಂಸ್ಥೆ ಗಳಿಂದ ಉತ್ತಮ ಶಿಕ್ಷಕರನ್ನು ಸ್ವತಃ ತಾವೇ ಆಯ್ಕೆ ಗೊಳಿಸಿ (ಆಡಳಿತ ಮಂಡಳಿ) ಪಟ್ಟಿಯನ್ನು ಸೆ.೨೮ ಗುರುವಾರ ದೊಳಗಾಗಿ ಕಳುಹಿಸಿ ಕೊಡಬೇಕು ಎಂದರು.
ತಮ್ಮ ಸಂಸ್ಥೆಗಳ ವತಿಯಿಂದ ಆಯ್ಕೆಗೊಳಿಸಿದ ಉತ್ತಮ ಶಿಕ್ಷಕರ ವಿಶೇಷತೆ ಕುರಿತಂತೆ ೪೦ ಸೆಕೆಂಡ್ ಗಳ ವಿಡಿಯೋ ಕ್ಲಿಪ್ ನ್ನು ಕೂಡ ಕಳುಹಿಸಬೇಕು .ಆ ವಿಡಿಯೋ ಕ್ಲಿಪ್ ನ್ನು ಕಾರ್ಯಕ್ರಮದ ದಿನದಂದು ಟಿ.ವಿ ಸ್ಕ್ರೀನ್ ನಲ್ಲಿ ಪ್ರಸ್ತುತ ಪಡಿಸಲಾಗುವದೆಂದು ತಿಳಿಸಿದರು. ಸ್ಥಳೀಯ ಶಾಸಕರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದು ,ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಅದ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಮಾಹಿತಿ ನೀಡಿದರು.ಪ್ರಾಥಮಿಕ ವಿಭಾಗದ ಪಟ್ಟಿಯನ್ನು ಸೈಯದ್ ತನ್ವಿರ್ ,ಪ್ರೌಢಶಾಲಾ ವಿಭಾಗ – ವಿರೇಶ ಅಗ್ನಿ ,ಪಿ.ಯು.ಸಿ ವಿಭಾಗ – ಪರಶುರಾಮ ಮಲ್ಲಾಪುರ ,ಪದವಿ ವಿಭಾಗದ – ಅನೀಲಕುಮಾರ ಬಳಿ ಈ ರೀತಿಯಾಗಿ ಅತ್ಯುತ್ತಮ ಶಿಕ್ಷಕರ ಆಯ್ಕೆಗೊಳಿಸಿದ ಪಟ್ಟಿಯನ್ನು ಈ ಜವಬ್ದಾರಿ ವಹಿಸಿದವರಲ್ಲಿ ತಮ್ಮ ಹೆಸರುಗಳನ್ನು ಕಳುಹಿಸಿಕೊಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅನೀಲಕುಮಾರ ,ವೆಂಕಟೇಶ್ವರಲು ,ಸೈಯದ್ ತನ್ವಿರ್,ಎನ್.ಸತ್ಯನಾರಾಯಣ ಶ್ರೇಷ್ಠಿ ,ಎಂ.ವೆಂಕಟರಾಮನ್ ,ಡಾ.ಅರುಣ್ ಕುಮಾರ ಬೇರ್ಗಿ ,ತಿಮ್ಮಣ್ಣ ನಾಯಕ , ಪರಶುರಾಮ ಮಲ್ಲಾಪುರ ,ಆರ್.ಸಿ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.