ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆ ಅನನ್ಯ

ಕಲಬುರಗಿ:ಫೆ.22: ಸರ್ಕರಿ ಶಾಲೆಗಳಷ್ಟೆ ಖಾಸಗಿ ಶಾಲೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅನನ್ಯ ಸೇವೆ ಸಲ್ಲಿಸುತ್ತಿವೆ ಎಂದು ಶ್ರೀನಿವಾಸ ಸರಡಗಿ ಮಠದ ಶ್ರೀ ಡಾ.ರೇವಣಸಿದ್ದ ಶೀವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.
ನಗರದ ಎಸ್‌ಎಂ ಪಂಡಿತ ರಂಗಮAದಿರದಲ್ಲಿ ಅಪ್ಪಾಜಿ ಕುರುಕಲ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ಅಪ್ಪಾಜಿ ಗುರುಕುಲ ಉತ್ಸವ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಖಾಸಗಿ ಶಾಲೆಗಳು ಗ್ರಾಮೀನ ವಿದ್ಯಾರ್ಥಿಗಳಿಗೆ ನೆರವಾಗುವಂತೆ ರಿಯಾಯಿತಿ ಧರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಅಂಥÀ ಶಾಲೆಗಳಲ್ಲಿ ಅಪ್ಪಾಜಿ ಗುರುಕುಲ ಶಾಲೆಯು ಒಂದಾಗಿದೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ಶಾಲೆಯ ಕಾರ್ಯ ಶ್ಲಾಘನೀಯ ಎಂದರು.
ಪೂಜ್ಯ ಲಿಂಗರಾಜಪ್ಪ ಅಪ್ಪ ಮಾತನಾಡಿ, ಪ್ರತಿಯೊಬ್ಬರಗೂ ಶಿಕ್ಷಣ ಸಿಗಬೇಲು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಸರ್ಕಾರಿ ಶಾಲೆೆಗಳು ಮತ್ತು ಖಾಸಗಿ ಶಾಲೆಗಳು ಉತ್ತಮ ಪ್ರಜೆಗಳನ್ನು ನಿರ್ಮಿಸುವ ತಾಣಗಳಾಗಬೇಕು ಎಂದು ಸಲಹೆ ನೀಡಿದರು.
ಜೈ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಚಿನ್ ಫರಹತಬಾದ್, ಕನ್ನಡಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಂಸ್ಥೆ ಅಧ್ಯಕ್ಷೆ ಭಾಗಮ್ಮ ಉದನೂರ, ಉಪಾಧ್ಯಕ್ಷ ಬಸಯ್ಯ ಮಠಪತಿ, ಸಿದ್ದು, ಭಗವತಿ, ಶಂಕರ ಬಿರಾದಾರ, ರಾಜಕುಮಾರ ಪಾಟೀಲ್ ಉದನೂರ, ಮೈತ್ರಾದೇವಿ,ಮಲ್ಲಿಕಾರ್ಜುನ ಸಿತಾಳೆ, ಬಾಬುಲಾಲ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ನಂತರ ಮಕ್ಕಳಿಂದ ನಾಟಕ, ಸಂಗೀತ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನುಸನ್ಮಾನಿಸಲಾಯಿತು. ಆದರ್ಶ ಪಾಲಕರನ್ನೂ ಕೂಡ ಸತ್ಕರಿಸಲಾಯಿತು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.