ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

????????????????????????????????????

ಸರ್ಕಾರದಿಂದ ಮಲತಾಯಿ ಧೋರಣೆ ಸಲ್ಲದುಃಹೆಚ್.ಶರ್ಫುದ್ದೀನ್ ಟೀಕೆ
ಮಾನ್ವಿ, ಃ ಕೋವಿಡ್-೧೯ ಹಿನ್ನಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಿತಿ ಚಿಂತಾಜನಕವಾಗಿದ್ದು ಈ ಭಾಗದ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸುವ ಖಾಸಗಿ ಶಾಲೆಗಳ ಪಾಲಿಗೆ ಆಸರೆಯಾಗಬೇಕಿದ್ದ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯವಾದುದು ಎಂದು ತಾಲೂಕ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ್ ಟೀಕಿಸಿದರು.
ಖಾಸಗಿ ಶಾಲೆಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರದಂದು ತಾ,ಖಾ,ಶಾ,ಶಿ,ಸಂ,ಒಕ್ಕೂಟದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲೆಗಳ ಉಳಿವಿಗಾಗಿ ಒತ್ತಾಯಿಸಿ ಕಳೆದ ಮೂರ್‍ನಾಲ್ಕು ತಿಂಗಳುಗಳಿಂದ ವಿವಿಧ ಹಂತದ ಹೋರಾಟದ ಮೂಲಕ ಮನವಿಗಳನ್ನು ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕೊರೂನಾ ವೈರಸ್ ಸೋಂಕು ಹರಡುವ ಭೀತಿಯಿಂದ ಎಲ್ಲಾ ಶಾಲಾ ಕಾಲೇಜುಗಳನ್ನು ಮುಚ್ಚಲ್ಪಟ್ಟಿದ್ದು ಈ ಕ್ರಮದಿಂದ ಖಾಸಗಿ ಶಾಲೆಗಳ ಶಿಕ್ಷಕರಿಗೆ ವೇತನ ನೀಡಲಾಗದೆ ತೀರಾ ಆರ್ಥಿಕ ಸಂಕಷ್ಠಕ್ಕೆ ಗುರಿಯಾಗಿವೆ ಎಂದು ಹೇಳಿದರು.
ಖಾಸಗಿ ಶಾಲೆಗಳ ಪ್ರಮುಖ ಬೇಡಿಕೆಗಳಾದ ಶಾಲೆಗಳ ಪುನಶ್ಚೇತನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು ಮತ್ತು ಶಾಲೆಗಳ ಪ್ರಾರಂಭಕ್ಕೆ ತಮೆದೋರಿರುವ ದ್ವಂದ್ವ ನಿರ್ಣಯಗಳನ್ನು ಹೋಗಲಾಡಿಸಬೇಕು ಹಾಗೂ ಶಾಲೆಗಳ ಪ್ರಾರಂಭದ ಜವಬ್ದಾರಿಯನ್ನು ಸರ್ಕಾರವೇ ನಿರ್ವಹಿಸಬೇಕು, ೨೦೧೯-೨೦ನೇ ಸಾಲಿನ ಆರ್‌ಟಿಇ ಶುಲ್ಕ ಪೂರ್ಣ ಪ್ರಮಾಣದಲ್ಲಿ ಪಾವತಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕೆಂದು ಹೆಚ್.ಶರ್ಫುದ್ದೀನ್ ಒತ್ತಾಯಿಸಿದರು.
ಈ ವೇಳೆ ತಾ,ಖಾ,ಶಿ,ಸಂ,ಒಕ್ಕೂಟ ಪ್ರಧಾನಕಾರ್ಯದರ್ಶಿ ರಾಜು ತಾಳಿಕೋಟೆ, ಬಿ.ವಿ.ರೆಡ್ಡಿ, ರಾಜಾಸುಭಾಶ್ಚಂದ್ರನಾಯಕ, ಶೇಖ್ ಫರೀದ್ ಉಮ್ರಿ, ಎಂ.ಎ.ಹೆಚ್.ಮುಕೀಂ, ಕೆ.ಈ.ನರಸಿಂಹ, ಅಖಿಲೇಶ, ಶರಣಬಸವ, ಭೀಮರಾಯ ಶೀತಿಮನಿ, ಡಿ.ವಿ.ಪ್ರಕಾಶ, ಎಂ.ಡಿ.ಆರೂನ್, ಮೇಘನಾ, ಹುಸೇನ್‌ಭಾಷ ಇದ್ದರು.
(ಫೋಟೋ ಕ್ಯಾಪ್ಸನ್ ಃ ೧೧ಮಾನ್ವಿ೧, ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಇಒ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.


ಸುಂಕೇಶ್ವರ ಗ್ರಾ.ಪಂ.ನರೇಗಾ ಕಾಮಗಾರಿಗಳು ಕಳಪೆಃತನಿಖೆಗೆ ಪ್ಯಾಂಥರ್ ದೂರು

ಮಾನ್ವಿ, ಃ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಅಭಿವೃದ್ದಿ ಕಾಮಗಾರಿಗಳು ತೀರಾ ಕಳಪೆ ಮಟ್ಟದಿಂದ ಕೂಡಿದ್ದು ಅಭಿವೃದ್ದಿ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದಲ್ಲಿ ಆವ್ಯವಹಾರ ನಡೆದಿದ್ದು ಸೂಕ್ತ ತನಿಖೆಯನ್ನು ಕೈಗೊಳ್ಳಬೇಕೆಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿರುವ ದೂರುನಲ್ಲಿ ಭಾರತೀಯ ದಲಿತ ಪ್ಯಾಂಥರ್ ಗ್ರಾಮ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

ಸುಂಕೇಶ್ವರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸುಂಕೇಶ್ವರ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳು ಹಾಗೂ ಹರನಹಳ್ಳಿ ಗ್ರಾಮದಲ್ಲಿ ಕಲ್ಯಾಣಿ ಹೊಳೆತ್ತುವ ಕಾಮಗಾರಿ ಮತ್ತು ಸುಂಕೇಶ್ವರ ತಾಂಡಾದಲ್ಲಿ ಅಂಗನವಾಡಿ ಕಟ್ಟಡ, ಬಿಸಿಯೂಟ ಕೋಣೆ, ಶಾಸ್ತ್ರಿಕ್ಯಾಂಪ್‌ನಲ್ಲಿ ಬಿಸಿಯೂಟ ಕೊಠಡಿ, ಅಂಗನವಾಡಿ ಕಟ್ಟಡ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ. ನಿಯಮಬಾಹಿರ ಕಾಮಗಾರಿಗಳ ನಿರ್ಮಾಣ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮಾಭಿವೃದ್ದಿ ಕಾಮಗಾರಿಗಳನ್ನು ತೀರಾ ಕಳಪೆ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತೇದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‌ಗಳನ್ನು ತಡೆ ಹಿಡಿಯಬೇಕು. ಇಲ್ಲದಿದ್ದರೆ ಭಾರತೀಯ ದಲಿತ ಪ್ಯಾಂಥರ್ ಗ್ರಾಂ ಘಟಕದಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗತ್ತದೆ ಎಂದು ಮಲ್ಲಿಕಾರ್ಜುನ ಎಚ್ಚರಿಸಿದ್ದಾರೆ.

ಈ ವೇಳೆ ಪದಾಧಿಕಾರಿಗಳಾದ ರಮೇಶ, ಸುರೇಶ, ಹನುಮಂತ ಸೇರಿದಂತೆ ಇನ್ನಿತರರಿದ್ದರು.