ಖಾಸಗಿ ಶಿಕ್ಷಣ ಸಂಸ್ಥೆಗಳ ಕನ್ನಡ ಶಾಲಾ ಉಳಿವಿಗಾಗಿ ಪಾದಯಾತ್ರೆ

ಶಹಾಪುರ ನ 13: ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮತ್ತು ಶಾಲಾ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ ಕುಮಾರ ಮತ್ತು ಮಹಾಂತೇಶ ದೇಸಾಯಿ ರವರು ಖಾಸಗಿ ಶಾಲಾ ಶಿಕ್ಷಕರಿಗೆ ಅನುದಾನ ನೀಡಲು ಆಗ್ರಹಿಸಿ ಹೋರಾಟ ಮಾಡುತ್ತ ಬೀದರ ಜಿಲ್ಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಾಗಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸಮಾಡುವ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಯಾವುದೇ ನ್ಯಾಯ ದೊರಕಿಲ್ಲ. ಸರ್ಕಾರ 1995ರ ನಂತರದ ಶಾಲಾ ಕಾಲೇಜು ಶಿಕ್ಷಕರ ವೇತನನುದಾನ ಇಲ್ಲದೆ ಶಿಕ್ಷಕರು ದುಡಿಯುತ್ತಿದ್ದಾರೆ. ಅವರನ್ನು ಸರ್ಕಾರ ಕಡೆಗಣಿಸಿದ್ದು ಬಡ ಕನ್ನಡ ಮಾದ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಸರ್ಕಾರ ಕೂಡಲೇ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ವೇತನನುದಾನ ನೀಡಬೇಕು ಇಲ್ಲವಾದರೆ ದರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದರು.ಇಲ್ಲಿಗೆ 8 ನೆಯ ದಿನವಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಲ್ಲರೂ ಸಹಕಾರ ಮಾಡಿ ಎಂದರು. ಪಾದಯಾತ್ರೆಯು ಶಹಾಪುರ ನಗರದ ಚರಬಸವೇಶ್ವರ ಕಮಾನಗೆ ಬರುತ್ತಿದ್ದಂತೆ ತಾಲೂಕ ರುಪ್ಸ ಸಂಘಟನೆಯ ವತಿಯಿಂದ ಆತ್ಮೀಯ ಸ್ವಾಗತ ಕೋರಿ ಗೌರವಿಸಲಾಯಿತು. ರುಪ್ಸ ತಾಲೂಕ ಅಧ್ಯಕ್ಷ ಅಶೋಕ ಘನತೆ, ಕಾರ್ಯದರ್ಶಿ ತಿಪ್ಪಣ್ಣ ಕ್ಯಾತನಳ , ಪ್ರವೀಣ ಫಿರಂಗಿ, ಮೂರ್ತಿ ಮುದುಗಲ, ಶರಣಪ್ಪ ಕಟ್ಟಿಮನಿ, ಚಂದ್ರಶೇಕರ ಹೊಸಮನಿ, ರವಿ ಪತ್ತಾರ, ಗುರುಲಿಂಗಯ್ಯ ಸ್ವಾಮಿ, ಸುರೇಶ ಸೇರಿದಂತೆ ಇತರರು ಇದ್ದರು.