ಖಾಸಗಿ ಶಿಕ್ಷಣ ಸಂಸ್ಥೆಗಳಿಂದಾಗಿ ಅನಕ್ಷರತೆ ದೂರವಾಗಿದೆ: ಶ್ರೀ

ಅಫಜಲಪುರ:ನ.11: ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಜೊತೆ ಜೊತೆಯಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಂದಾಗಿ ರಾಜ್ಯದಲ್ಲಿ ಅನಕ್ಷರತೆ ಪ್ರಮಾಣ ಕಡಿಮೆಯಾಗಿದೆ ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.

ಅಫಜಲಪುರ ಪಟ್ಟಣದ ಮಳೇಂದ್ರ ಮಠದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ನೂತನ ತಾಲೂಕು ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಆರ್ಥಿಕ ಸಂಕಷ್ಟದ ನಡುವೆಯೂ ಖಾಸಗಿ ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ, ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಸರ್ಕಾರದ ಯಾವುದೇ ಯೋಜನೆಗಳ ಲಾಭವಿಲ್ಲ, ಅನುದಾನವಿಲ್ಲದಿದ್ದರೂ ನಿರಂತರವಾಗಿ ಶಿಕ್ಷಣ ನೀಡುತ್ತಿವೆ. ಸಧ್ಯ ಕೊರೋನ ಭೀತಿಯಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಿಕೊಂಡಿವೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಬೇಕೆಂದು ಹೇಳಿದರು.

ನೂತನ ಆದ್ಯಕ್ಷ ಚಂದ್ರಕಾಂತ ಸಿಂಗೆ ಹಾಗೂ ಕಾರ್ಯಾಧ್ಯಕ್ಷ ರೇವಣಸಿದ್ದ ನಂದೂರ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವಾಗಲೂ ಒಳ್ಳೆಯ ಶಿಕ್ಷಣ ನೀಡುತ್ತಾ ಬಂದಿವೆ. ಮುಂದೆಯೂ ಒಳ್ಳೆಯ ಶಿಕ್ಷಣವನ್ನು ನೀಡಲಿವೆ. ತಾಲೂಕಿನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ದಿಗಾಗಿ ಸರ್ಕಾರದ ಅನುದಾನ ತಂದು ಅಭಿವೃದ್ದಿ ಮಾಡುವ ಜವಾಬ್ದಾರಿ ಎಲ್ಲರೂ ಸೇರಿ ನೀಡಿದ್ದೀರಿ ಅದನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ. ಅಲ್ಲದೆ ಸರ್ಕಾರದ ಮಲತಾಯಿ ಧೋರಣೆಯ ವಿರುದ್ದ ಧ್ವನಿ ಎತ್ತಲಿದ್ದೇವೆ ಎಂದ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಸರಕಾರಕ್ಕೆ ಒತ್ತಡ ಹಾಕುತ್ತಲಿದೆ ಬಹು ಬೇಗನೆ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಆ ನಿಟ್ಟಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. ಜಿಲ್ಲಾಧ್ಯಕ್ಷ ಅಪ್ಪಾರವ್ ಹೆಗ್ಗಿ ಮಾತನಾಡಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರದ ಆದೇಶ ಪತ್ರ ನೀಡಿದರು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಗಂಗಾಧರ ಶ್ರೀಗಿರಿ, ಚಂದ್ರಕಾಂತ ಕರಜಗಿ, ಅಪ್ಪಾಶಾ ರಾಂಪೂರ, ರಾಜಶೇಖರ ಪಾಟೀಲ್, ಶಿವಶಂಕರ ಚಿಮ್ಮಲಗಿ, ಉದಯಕುಮಾರ ವಾಡೇಕರ್, ಎನ್.ಆರ್ ಸಾಸನೂರ, ಸಲೀಂ ಶೇಖ್, ಗುಂಡುರಾವ್ ದೇಶಮುಖ, ಸಿದ್ದು ಪೂಜಾರಿ, ಮಹಿಬೂಬ ನರಿಬೋಳ ಸೇರಿದಂತೆ ಇತರರಿದ್ದರು.