ಖಾಸಗಿ ಶಾಲೆಯ ಬಸ್ ಗೆ ಬೆಂಕಿ ಮಕ್ಕಳು ಅಪಾಯದಿಂದ ಪಾರು


(ಸಂಜೆವಾಣಿ ಪ್ರತಿನಿಧಿಯಿಂದ)
ಕೊಟ್ಟೂರು, ಜೂ.15:  ತರಳ ಬಾಳು ವಿದ್ಯಾ ಸಂಸ್ಥೆಯ ಖಾಸಗಿ ಶಾಲಾ ಬಸ್ ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಮಕ್ಕಳೆಲ್ಲ ಪ್ರಾಣಾಪಯದಿಂದ ಪಾರಾಗಿರುವ ಘಟನೆ ವಿಜಯನಗರ ಜಿಲ್ಲೆ
ಕೊಟ್ಟೂರು ಪಟ್ಟಣದ ಕೆ. ಅಯ್ಯನ ಹಳ್ಳಿ ಗ್ರಾಮದ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಎಂದಿನಂತೆ ವಿವಿಧ ಹಳ್ಳಿಗಳಿಂದ ಖಾಸಗಿ ಶಾಲೆಗೆ ಮಕ್ಕಳನ್ನು  ಕರೆದುಕೊಂಡು ಕೊಟ್ಟೂರಿಗೆ ಬರುತ್ತಿತ್ತು ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ, ಹೊಗೆ ಕಾಣಿಸಿಕೊಂಡಾಗ,  ತಕ್ಷಣ ಚಾಲಕ ಮಕ್ಕಳನ್ನು ಕೆಳಗಿಳಿಸಿದ್ದಾನೆ. ಬಸ್ ಸಂಪೂರ್ಣ ಸುಟ್ಟಿದೆ.
ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

One attachment • Scanned by Gmail