ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.25 ದುಡ್ಡು ಕೊಟ್ಟು ಖಾಸಗಿ ಶಾಲೆಯಲ್ಲಿ ಓದುವಂತವರು ನಡುವೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ರೈತರ ಕೂಲಿ ಕಾರ್ಮಿಕರ ಬಡವರ ಮಕ್ಕಳರಾಗಿರುತ್ತಾರೆ ಅವರಿಗೂ ಒಳ್ಳೆಯ ಶಿಕ್ಷಣ ದೊರೆಯಬೇಕೆಂಬು ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಬೇಕಾದ ಸಲಕರಣೆಗಳನ್ನು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಕ್ಷೇತ್ರದ ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು. ತಾಲೂಕಿನ ಚಿಲಗೋಡು ಗ್ರಾಮದಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಈಗ ಸಿಗುವಂತಹ ಸರ್ಕಾರಿ ಸೌಲಭ್ಯಗಳು ಸಿಗುತ್ತಿರಲಿಲ್ಲ ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಲು ಹಲವು ರೀತಿಯ ಸರ್ಕಾರಿ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜೊತೆ ಕಲೆ ಸಾಹಿತ್ಯ ಸಂಗೀತ ಇನ್ನಿತರ ಚಟುವಟಿಕೆಗಳಲ್ಲಿ ಮುಂದುವರೆ ಮುಂದುವರೆಯಬೇಕಿದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕಾಗಿದೆ ಕಷ್ಟಪಟ್ಟು ವಿದ್ಯೆ ಕಲಿಸುವ ತಂದೆ ತಾಯಿ ಗುರುಹಿರಿಯರಿಗೆ ಹೆಸರನ್ನು ತರುವಂತ ಕೆಲಸ ಮಾಡಬೇಕಿದೆ ಎಂದರು.
ನಂದಿಪುರದ ಶ್ರೀ ಮಹೇಶ್ವರ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಾಸ್ತವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಮಾತನಾಡಿದರು ಈ ಸಂದರ್ಭದಲ್ಲಿ ವೈ. ಮಲ್ಲಿಕಾರ್ಜುನ, ಬಾದಾಮಿ ಮೃತ್ಯುಂಜಯ ಚಿತ್ತವಾಡಗಿ ಪ್ರಕಾಶ್ ಜಿಎಂ ಜಗದೀಶ್ ಬ್ಯಾಟಿ ನಾಗರಾಜ್, ಬಾಚಿ ಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೈಲಮ್ಮ, , ಸಮನ್ವಯ ಅಧಿಕಾರಿ ಎನ್ ಎಸ್ ಪ್ರಭಾಕರ್, ಡಿ ಡಿ ಪಿ ಐ ಕಚೇರಿ ಅಧಿಕಾರಿ ಶ್ರೀನಿವಾಸ, ಬಿಸಿಯೂಟದ ಅಧಿಕಾರಿ ರವಿ ನಾಯ್ಕ್, ಶಿಕ್ಷಣ ಇಲಾಖೆಯ ಮುಸ್ತಾಕ್ ಅಬ್ಬಾಸ್ಮ, ಪಂಚಾಯಿತಿ ಅಧ್ಯಕ್ಷೆ ಮೈಲಮ್ಮ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ, ಕಾರ್ಯದರ್ಶಿ ಬಿ ಕೊಟ್ರಪ್ಪ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್. ರವಿಚಂದ್ರನಾಯ್ಕ್ , ಕೃಷ್ಣ ನಾಯ್ಕ್, ದೀಪಿಕಾ ದಾದಾಬಿ, ಹಿರ್ಯ ನಾಯ್ಕ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಎಸ್ ಡಿ ಎಂ ಸಿ ಅಧ್ಯಕ್ಷ ಚೌಟ್ಗಿ ಪ್ರಕಾಶ್ ಎಸ್ ಡಿ ಎಂ ಸಿ ಅಧ್ಯಕ್ಷರು, ಪದಾಧಿಕಾರಿಗಳು, ಸೊನ್ನ ಮೋರ ಗೇರಿ , ಕೋಗಳಿ ಹಂಪಾಪಟ್ಟಣ ಬಾಚಗೊಂಡನಹಳ್ಳಿ, ಹಂಪ ಸಾಗರ ಇನ್ನಿತರ ವಲಯದ ವಿವಿಧ ಶಾಲೆಗಳಿಂದ ಬಂದ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಚಿಲುಗೋಡು ಗ್ರಾಮದ ನಾಗರಿಕರು ಪಾಲ್ಗೊಂಡಿದ್ದರು. ಅಂಕ ಸಮುದ್ರ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅಕ್ಷರ ಪಲ್ಲಕ್ಕಿ ಮತ್ತು ನಟರಾಜ ನೃತ್ಯ ರೂಪಕ ಕಲೆ ರಸಪ್ರಶ್ನೆ ವಿಜ್ಞಾನ, ಜಾನಪದ ಗೀತೆ ಮಿಮಿಕ್ರಿ ಅಭಿನಯ ಗೀತೆ ಭರತನಾಟ್ಯ ಕವಾಲಿ ಕಲೆಗಳು ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಿದವು.
One attachment • Scanned by Gmail