ಖಾಸಗಿ ಶಾಲೆಗಳಿಗೆ ಪ್ರವೇಶ ನಕಾರ ಬೆಂಗಳೂರಿಗೆ ಬಂದ ಹೋಪ್

ಡೆಹ್ರಾಡೂನ್, ಜೂ.೯- ದೇಶದ ಅತ್ಯಂತ ಕಿರಿಯ ವೀಲ್‌ಚೇರ್ ರೇಸರ್‌ಗಳಲ್ಲಿ ಒಬ್ಬರಾಗಿರುವ ಹಲವಾರು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿರುವ ಜೂನಿಯರ್ ಪ್ಯಾರಾ ಅಥ್ಲೀಟ್ ಹೋಪ್ ತೆರೇಸಾ ಡೇವಿಡ್ ಅವರಿಗೆ ಹಿಮಾಚಲಪ್ರದೇಶದ ಎಂಟು ಖಾಸಗಿ ಶಾಲೆಗಳಿಂದ ಪ್ರವೇಶ ನಿರಾಕರಿಸಿದ ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ.

೧೨ ವರ್ವದ ಪ್ಯಾರಾ ಒಲಂಪಿಕ್ ಕ್ರೀಡಾಪಟು ತನ್ನ ತವರೂರು ಡೆಹ್ರಾಡೂನ್‌ನಲ್ಲಿ, ಅವಕಾಶ ಸಿಗದೆ ’ಇತರ ವಿದ್ಯಾರ್ಥಿಗಳೊಂದಿಗೆ ಹೊಂದಿಕೊಳ್ಳಲು ಆಗದೆ ’ಶಾಲೆಗಳಲ್ಲಿ ಅಂಗವಿಕಲರಿಗೆ ಸ್ನೇಹಿ ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರಿಗೆ ಬಂದಿರುವ ಘಟನೆ ನಡೆದಿದೆ.

ದೇಶದ ಶೈಕ್ಷಣಿಕ ಕೇಂದ್ರವೆಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರು ನಗರದಲ್ಲಿ ಅಧ್ಯಯನ ಮಾಡಲು ಮಗಳು ಬಯಸುತ್ತಾಳೆ ಎಂದು ಪೋಷಕರು ತಿಳಿಸಿದ್ದಾರ

ಬಾಲಕಿ ” ಪ್ರತಿದಿನ ತನ್ನ ಶಾಲೆಗೆ ಕೈಯಿಂದ ಒಯ್ಯಬೇಕಾಗಿತ್ತು. ಇದು ಆಘಾತಕಾರಿ ಅನುಭವ ಮತ್ತು ನಾವು ನಾಲ್ಕು ವರ್ಷಗಳ ಕಾಲ ಗುರುಗ್ರಾಮ್‌ಗೆ ಸ್ಥಳಾಂತರಗೊಂಡಿದ್ದೇವೆ ಎಂದಿದ್ದಾರೆ.

ಮೂರನೇ ಶಾಲೆಯ ನಂತರ, ವಿದ್ಯಾರ್ಥಿನಿ ನಿರಾಶೆಗೊಂಡಳು. ನಂತರ ಇತರ ಶಾಲೆಗಳಿಗೆ ಇಮೇಲ್‌ಗಳನ್ನು ಕಳುಹಿಸಿದ್ದೇವೆ ಆದರೆ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲಿಲ್ಲ ಮತ್ತು ದೂರು ದಾಖಲಿಸಲು ಮತ್ತು ಹೊರಹೋಗುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.

ಕುಟುಂಬದವರ ದೂರನ್ನು ಗಮನಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಗೀತಾ ಖನ್ನಾ, “ನಾವು ಸಭೆ ನಡೆಸಿದ್ದೇವೆ ಮತ್ತು ಶಾಲೆಗಳಲ್ಲಿ ಪರಿಶೀಲನೆ ನಡೆಸಿ ಈ ಸಂಬಂಧಿತ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲು ಸೂಚಿಸಿದ್ದೇವೆ.