ಖಾಸಗಿ ಶಾಲೆಗಳಿಗೆ ಕಿರುಕುಳ ತಪ್ಪಿಸಿ: ಜಿಲ್ಲಾಧಿಕಾರಿಗಳಿಗೆ ಮನವಿ

ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ7: ಖಾಸಗಿ ಶಾಲೆಗಳಿಗೆ ಪರವಾನಗಿ ನವೀಕರಣದ ಹೆಸರಿನಲ್ಲಿ ಸರ್ಕಾರ ಅನವಶ್ಯಕವಾಗಿ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು ಎಂದು ಒತ್ತಾಯಿಸಿ ಹೊಸಪೇಟೆ ತಾಲೂಕು ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. .
ಪ್ರತಿ 5 ವರ್ಷಕ್ಕೊಮ್ಮೆ ಎಲ್ಲಾ ದಾಖಲೆಗಳೊಂದಿಗೆ ಶಿಕ್ಷಣ ಇಲಾಖೆಗೆ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆಗೆ ಸಲ್ಲಿಸುತ್ತಿದ್ದೇವೆ. ಇತ್ತೀಚೆಗೆ ಇಲಾಖೆಯಿಂದ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆ ಪ್ರಮಾಣ ಪತ್ರ ಸೇರಿ ಇತರೆ ಅನವಶ್ಯಕವಾಗಿ ಸೌಲಭ್ಯ ನೀಡಿ ಎಂದು ಖಾಸಗಿ ಶಾಲೆಗಳ ಮೇಲೆ ಬಲವಂತದಿಂದ ಬೇಡಿಕೆ ಹೇರುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಆರ್ಥಿಕ ನಷ್ಟ ನುಭವಿಸುತ್ತಿದ್ದೆವೆ. ಆದ್ದರಿಂದ ಇತರೆ ಸರಕಾರದ ಸೂಚನೆಗಳಿಗೆ ಕಾಲಾವಕಾಶ ನೀಡಬೇಕು. ಆದ್ದರಿಂದ ಈ ಬಾರಿ ಈ ನಿಯಮನ್ನು ಸಡಿಲಿಸಿ ಮಾನ್ಯತೆ ನೀಡಬೇಕು. ಹಾಗೂ ಮಾನ್ಯತೆ ನವೀಕರಣದ ಅಧಿಕಾರವನ್ನು ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಇವರಿಗೆ ಅಧಿಕಾರಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಡಿ.ಹನುಮಂತಪ್ಪ, ಬಾನು ಕಿರಣ್‍ಕುಮಾರ್, ಶ್ರೀನಿವಾಸ್ ಸೇರಿದಂತೆ ಖಾಸಗಿ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.