ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರದ ಕಿಟ್

ದೇವದುರ್ಗ.ಜೂ.೦೪-ಲಾಕ್‌ಡೌನ್ ಜಾರಿಯಿಂದ ಕಳೆದ ಎರಡು ವರ್ಷಗಳಿಂದ ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಪಟ್ಟಣದ ಸ್ಪೂರ್ತಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಯುವ ಬ್ರಿಗೇಡ್ ಸಂಘಟನೆಯಿಂದ ಆಹಾರದ ಕಿಟ್ ಗುರುವಾರ ವಿತರಿಸಲಾಯಿತು.
ಬಸವ ಕ್ಲಿನಿಕ್ ವೈದ್ಯ ಬಸವರಾಜ ರಡ್ಡಿ ಮಾತನಾಡಿ, ಕರೊನಾದಿಂದ ಎಲ್ಲರಿಗೂ ಸಂಕಷ್ಟ ಎದುರಾಗಿದೆ. ವಿಶೇಷವಾಗಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸ್ಥಿತಿ ಹೇಳತೀರದಾಗಿದೆ. ಇಂಥ ಸಂದರ್ಭದಲ್ಲಿ ಯುವ ಬ್ರಿಗೇಡ್ ನೆರವಿಗೆ ನಿಂತಿರುವುದು ಸಂತಸದ ವಿಷಯ.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, ಯುವ ಬ್ರಿಗೇಡ್ ಕರೊನಾ ಸಂದರ್ಭದಲ್ಲಿ ಖಾಸಗಿ ಶಿಕ್ಷಕರಿಗೆ ಸಹಾಯ ಮಾಡುತ್ತಿರುವುದು ತುಂಬ ಉತ್ತಮ ಕಾರ್ಯ. ನಾನು ಸಹ ಯುವಾ ಬ್ರಿಗೇಡ್‌ನ ಕಾರ್ಯಗಳ ಜತೆಯಾಗುವೆ ಎಂದರು.
ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಸುರೇಶ ಅಂಗಡಿ, ತಾಲೂಕು ಸಂಚಾಲಕ ಗಂಗನಗೌಡ ಗೌರಂಪೇಟಿ, ಸತೀಶ ಚಿತ್ರಗಾರ, ಪೂಜ್ಯರಾದ ಶಂಕರಲಿಂಗಯ್ಯ ಸ್ವಾಮಿ, ಸಂಗಮೇಶ ಹರವಿ, ರಾಜು ಬಳೆ, ಮಹೇಶ ಪಾಟೀಲ್ ಇತರರಿದ್ದರು.