ಖಾಸಗಿ ವಾಹನಗಳ ದರ್ಬಾರ್ ಕೊರೋನಾಕ್ಕೆ ಡೋಂಟ್ ಕೇರ್ !!

ಕಲಬುರಗಿ:ಎ.18:ಸಾರಿಗೆ ನೌಕರರ ಮುಷ್ಕರ 11 ದಿನಗಳು ಕಳೆದರೂ ಸಿಗದ ಪರಿಹಾರಕ್ಕೆ ಪ್ರಯಾಣಿಕರಿಗೊಂದು ದೊಡ್ಡ ಹೊಡೆತದ ಬಿಸಿ ತಟ್ಟಿದೆ. ಪ್ರತಿನಿತ್ಯ ಉದ್ಯೋಗಕ್ಕಾಗಿ ನಗರಕ್ಕೆ ಹೋಗುವ ಸಾವಿರಾರು ಪ್ರಯಾಣಿಕರ ಗೋಳು ಕೇಳುವವರು ಯಾರು ? ಇದಕ್ಕೆ ಜನ ಪ್ರತಿನಿಧಿಗಳು ಒಂದು ಸಲ ಅಫಜಲಪುರ ವಾಹನ ನಿಲ್ದಾಣಕ್ಕೆ ಬಂದು ನೋಡಿ.ಅಫಜಲಪುರದಿಂದ ಕಲಬುರ್ಗಿಗೆ ಹೋಗಬೇಕಾದರೆ ಮಾಸಿಕ ಪಾಸ್ ಪಡೆದುಕೊಂಡು ಸಂಚರಿಸುವ ಹಲವಾರು ಪ್ರಯಾಣಿಕರ ಪಾಡೇನು ?150 ರೂಪಾಯಿ ಕೊಟ್ಟು ಉದ್ಯೋಗಕ್ಕಾಗಿ ಅರಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗೆ ಮುಂದುವರೆದರೆ ಕೋವಿಡ್ ಎರಡನೇ ಮಹಾಮಾರಿಯ ಇಂತಹ ಸಮಯದಲ್ಲಿ ಒಬ್ಬರಮೇಲೊಬ್ಬರು ಕುಳಿತುಕೊಂಡು ಸಂಚರಿಸುವ ಮ್ಯಾಕ್ಸಿಕ್ಯಾಬ್ ನಲ್ಲಿ ಮಾಸ್ಕ್ ಇನ್ನೆಲ್ಲಿ ಸಾಮಾಜಿಕ ಅಂತರ ಇನ್ನೆಲ್ಲಿ ? ಬೈಕ್ ಮೇಲೆ ಸಂಚರಿಸಬೇಕಾದರೆ ದಾರಿಯಲ್ಲಿ ಪೆÇಲೀಸ್ ಅಧಿಕಾರಿಗಳು ವಾಹನವನ್ನು ತಡೆದು ನಿಮ್ಮಲ್ಲಿ ಮಾಸ್ಕ್ ಎಲ್ಲಿ ? ಎಂದು ಕೇಳುವುದು ಸಾಮಾನ್ಯದ ಸಂಗತಿ ಅದು ಅವರ ವೃತ್ತಿ ಸಾಮಾಜಿಕ ಕಳಕಳಿ ಅದಕ್ಕೆ ನನ್ನ ಅಭ್ಯಂತರವಿಲ್ಲ.
ಆದರೆ ಮ್ಯಾಕ್ಸಿಕ್ಯಾಬಗಳ ತಾಣವಾದ ಅಫಜಲಪುರ ಬಸ್ ನಿಲ್ದಾಣ ದಲ್ಲಿ ಸಂಚರಿಸುವ ಡ್ರೈವರ್ ಹಿಡಿದು ಯಾವುದೇ ಪ್ರಯಾಣಿಕರಲ್ಲಿ ಕೂಡ ಮಾಸ್ಕ್ ಕಂಡು ಬರದಿರುವುದು ಕಣ್ಣಾರೆ ನೋಡಬಹುದು. ಸಾಮಾಜಿಕ ಅಂತರ ಕಂಡು ಬರದೆ ಇರುವುದು ಮಹಾಮಾರಿ ನಿಯಂತ್ರಣ ಇಲ್ಲದಿರುವುದು ನಿತ್ಯನೋಟ. ಹೀಗೆ ಮುಂದುವರೆದರೆ ಸಾರಿಗೆ ಮುಷ್ಕರ ಜೊತೆ ಪ್ರಯಾಣಕ್ಕಾಗಿ ಜನಸಾಮಾನ್ಯರ ಮುಷ್ಕರವು ಮಾಡುತ್ತಾರೆ ಎಂಬ ಅನುಮಾನ ಹುಟ್ಟುಹಾಕಿದೆ ಎಂದು ಶ್ರೀಶೈಲ್ ಮಠಪತಿ.ಪತ್ರಿಕೋದ್ಯಮ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ತಿಳಿಸಿದ್ದಾರೆ.