ಖಾಸಗಿ ವಾಹನಗಳದೆ ದರ್ಬಾರ್ ದುಪ್ಪಟ್ಟು ದರ ತೆತ್ತು ತೆರಳುವ ಪರಿಸ್ಥಿತಿ ಪ್ರಯಾಣಿಕರದ್ದು

?????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ:ಎ.8:ಸಾರಿಗೆ ಮುಷ್ಕರದಿಂದ ಪರ ಊರುಗಳಿಗೆ ಹೋಗ ಬೇಕಿದ್ದ ಪ್ರಯಾಣಿಕರು ಖಾಸಗಿ ವಾಹನಗಳದತ್ತ ಮುಖಮಾಡಿ ಪ್ರಯಾಣ ಬೆಳೆಸಲು ಹೋದರೆ ಖಾಸಗಿ ವಾಹನಗಳ ಮಾಲಿಕರು ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ವಸೋಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಸಿಂದಗಿ ತಾಲ್ಲೂಕಿನ ಗುತ್ತರಗಿ ಪ್ರಯಾಣಿಕ ಸಿದ್ದರಾಮ ನಾಯಕ

ನಾನು ನಿನ್ನೆ ತಂಗಡಗಿ ದೇವಸ್ಥಾನ ಕ್ಕೆ ಆಗಮಿಸಿ ಇವತ್ತು ನಮ್ಮ ಊರಿಗೆ ಹೋಗಲು ಬಸ್ ನಿಲ್ದಾಣ ಕ್ಕೆ ಬಂದರೆ ಬಸ್ ಇಲ್ಲ ಖಾಸಗಿ ವಾಹನಗಳು ದುಪ್ಪಟ್ಟು ದುಡ್ಡು ಕೇಳುತ್ತಿದ್ದಾರೆ ವಿಜಯಪುರ ಕ್ಕೆ 200 ರೂ ಕೇಳುತ್ತಿದ್ದಾರೆ ,ಹೂವಿನ ಹಿಪ್ಪರಗಿ ಗೆ 34 ಬಸ್ ದರ ಇದ್ದರೆ ಇವರು 100 ರೂ ಕೇಳುತ್ತಿದ್ದಾರೆ ಅಷ್ಟು ಹಣ ಕೊಟ್ಟು ಹೋಗುವ ಶಕ್ತಿ ಕೆಲವರಿಗೆ ಇರುವುದಿಲ್ಲ ಹೀಗಾಗಿ ನಮ್ಮ ಕಷ್ಟ ಯಾರಿಗೆ ಹೇಳಬೇಕು? ಅಂತ ತಮ್ಮ ಅಸಹಾಯಕತೆ ತೋಡಿ ಕೊಂಡರು.

ಖಾಸಗಿ ವಾಹನಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೇಳಬಾರದು , ಹೆಚ್ಚುವರಿ ಹಣ ಕೇಳಿದವರ ಮೇಲೆ ಕಠಿಣ ಕ್ರಮಕೈಗೂಳ್ಳಲಿದ್ದೇವೆ ಅಂತ ಮುಖ್ಯಮಂತ್ರಿಗಳು ಹೇಳಿದ್ದರು ಸಹ ಖಾಸಗಿ ವಾಹನಗಳ ಮಾಲಿಕರು ಇದಕ್ಕೆ ಕವಡೆ ಕಾಸು ಬೆಲೆ ನೀಡಿದೆ ಜನರಿಂದ ಹಣ ವಸೂಲಿ ಗೆ ಇಳಿದಿದ್ದಾರೆ

ಶಾಲಾ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದಾರೆ,ಕಾಲೇಜುಗಳಿಗೆ ಬಂದಿದ್ದಾರೆ, ಆಸ್ಪತ್ರೆಗಳಿಗೆ ಬಂದಿದ್ದರೆ ಸಂತೆ ಮಾಡಲು ಹಳ್ಳಿಗಳಿಂದ ವಸತಿ ಬಸ್ ಗಳಿಂದ ಬಂದವರು ಪುನಃ ಗ್ರಾಮಕ್ಕೆ ಹೋಗಲು ಬಸ್ ಇಲ್ಲದೆ ಪರದಾಡುತ್ತಿರುವ ಪರಿಸ್ಥಿತಿ ಕಂಡು ಬಂತು .