ಖಾಸಗಿ ಮಾಹಿತಿಗೆ ದಕ್ಕೆ ಇಲ್ಲ: ವಾಟ್ಸಪ್ ಸ್ಪಷ್ಟನೆ

ನವದೆಹಲಿ, ಜ.೧೨- ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ ಬಳಿಕ ಬಳಕೆದಾರರ ಯಾವುದೇ ಖಾಸಗಿ ಮಾಹಿತಿಗೆ ಧಕ್ಕೆಯಾಗುವುದಿಲ್ಲ ಎಂದು ವಾಟ್ಸಪ್ ಸ್ಪಷ್ಟಪಡಿಸಿದೆ.

ವಾಟ್ಸಾಪ್ ಬಳಕೆದಾರರು ಅಥವಾ ಅವರ ಕುಟುಂಬದ ಸದಸ್ಯರ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡಲಾಗುವುದು ಇದರಲ್ಲಿ ಯಾವುದೇ ಸೋರಿಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬಳಕೆದಾರರಲ್ಲಿ ಈ ಸಂಬಂಧ ಯಾವುದೇ ಅನುಮಾನ ಬೇಡ ನಿಮ್ಮ ಎಲ್ಲ ಮಾಹಿತಿಗಳು, ವೈಯಕ್ತಿಕ ಮಾಹಿತಿಗಳು ಸುರಕ್ಷಿತವಾಗಿದೆ ಎಂದು ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ ಹೇಳಿದೆ.

ಕಳೆದವಾರ ವಾಟ್ಸಪ್ ಹೊಸ ಗೌಪ್ಯತಾ ನೀತಿಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಎಲ್ಲಾ ಫೇಸ್ಬುಕ್ ಬಳಕೆದಾರರು ಸೇರಿದಂತೆ ವಾಟ್ಸಪ್ ಮಾಹಿತಿ ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ಹೊಸ ಕೋಪಿತ ನಿಧಿ ಪ್ರಬ್ರವರಿ ಇಂದ ಜಾರಿಗೆ ಬರಲಿದೆ ಹೀಗಾಗಿ ಇನ್ನು ಮುಂದೆ ವಾಟ್ಸಾಪ್ನಲ್ಲಿ ನಡೆಸಿದ ಸಂಭಾಷಣೆಗಳು ಚಾಟ್ ಗಳು ಹೆಚ್ಚು ದಿನ ಇರುವುದಿಲ್ಲ ಎಂದು ಹೇಳಿದೆ.

ಹೊಸ ಗೌಪ್ಯತಾ ನೀತಿ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಅನೇಕರು ಈ ಸಂಬಂಧ ಅನುಮಾನ ವ್ಯಕ್ತಪಡಿಸಿದ್ದಾರೆ ಯಾವುದೇ ಬಳಕೆದಾರರಿಗೆ ಗೊಂದಲ ಬೇಡ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಜಗತ್ತಿನ ಅತ್ಯಂತ ವಾಟ್ಸಪ್ ಬಳಕೆದಾರರ ಸಂಖ್ಯೆ ಮತ್ತು ಅದನ್ನು ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ