
ಬೆಂಗಳೂರು, ಆ.೨೯-ವೇಗವಾಗಿ ಹೋಗುತ್ತಿದ್ದ ಖಾಸಗಿ ಬಸ್ ಹರಿದು ಪಾದಚಾರಿ ಮೃತಪಟ್ಟಿರುವ ದುರ್ಘಟನೆ ಸಿಟಿ ಮಾರ್ಕೆಟ್ ನ ಮಿನರ್ವ ಸರ್ಕಲ್ ಬಳಿ ನಡೆದಿದೆ.
ನಾಯಂಡನಹಳ್ಳಿಯ ಪಂತರಪಾಳ್ಯದ ಅಂಬೇಡ್ಕರ್ ನಗರ ಕೊಳಗೇರಿಯ ಮಂಜುನಾಥ್ (೨೮) ಮೃತಪಟ್ಟವರು.
ಬಸಪ್ಪ ಸರ್ಕಲ್ ನಿಂದ ಮಿನರ್ವ ಸರ್ಕಲ್ ಮಧ್ಯದ ನಂದಿನಿ ಹೋಟೆಲ್ ಬಳಿ ನಿನ್ನೆ ರಾತ್ರಿ ೧೦ರ ವೇಳೆ ಮಂಜುನಾಥ್ ನಡೆದುಕೊಂಡು ರಸ್ತೆಯನ್ನು ದಾಟುತ್ತಿದ್ದಾಗ ಶ್ರೀನಿವಾಸ ಟ್ರಾವೆಲ್ ಗೆ ಸೇರಿದ ಬಸ್ ಹರಿದು ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣವಾಗಿರುವ ಬಸ್ ಚಾಲಕ ಮುತ್ತುಕುಮಾರ್ ನನ್ನು ಬಂಧಿಸಿರುವ ಸಿಟಿ ಮಾರ್ಕೆಟ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.