ಖಾಸಗಿ ಬಸ್ ನಲ್ಲಿ 60.50 ಲಕ್ಷ ಜಪ್ತಿ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.20: ತಾಲೂಕಿನ ವಿದ್ಯಾನಗರದ ಬಳಿ ಖಾಸಗಿ ಬಸ್ ವೊಂದರಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 60.50 ಲಕ್ಷ ರೂ.ಗಳನ್ನು ಚುನಾವಣೆ ಫ್ಲೈಯಿಂಗ್ ಸ್ಕ್ಯಾಡ್ ವಶಕ್ಕೆ ಪಡೆದು ಒಬ್ಬರನ್ನು ಬಂಧಿಸಿದ್ದಾರೆ.
ಕಲಬುರಗಿ ಮೂಲದ ವ್ಯಕ್ತಿ ಎಚ್.ವಿಜಯಕುಮಾರ ಬಂಧಿತ ವ್ಯಕ್ತಿ ಎನ್ನಲಾಗಿದೆ. ಸಿಂಧನೂರಿನಿಂದ ಗಂಗಾವತಿ ನಗರಕ್ಕೆ ಆಗಮಿಸುತ್ತಿರವ ವೇಳೆ ಫ್ಲೈಯಿಂಗ್ ಸ್ಕ್ಯಾಡ್ ವಿಚಾರಣೆ ನಡೆಸಿದಾಗ ಹಣದ ಬ್ಯಾಗ್ ದೊರೆಕಿದೆ. ಇದಕ್ಕೆ ದಾಖಲೆ  ಕೇಳಿದಾಗ ಸರಿಯಾದ ಮಾಹಿತಿ ದಾಖಲೆ ನೀಡದ ಹಿನ್ನಲೆಯಲ್ಲಿ ಬ್ಯಾಗ್ ನಲ್ಲಿ ಇದ್ದ 60.50 ಲಕ್ಷ ರೂ ಹಣವನ್ನು ಜಪ್ತಿ ಮಾಡಲಾಗಿದೆ. ಫ್ಲೈಯಿಂಗ್ ಸ್ಕ್ಯಾಡ್ ಮಹಾಂತಗೌಡ ಪಾಟೀಲ್ ನೀಡಿದ ದೂರಿ ಮೇರಿಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.