
ಕೋಲಾರ, ಮಾ,೧೮- ಖಾಸಗಿ ಡೇರಿಗಳ ಕಲೆಬೆರಕೆ ದಂದೆಗೆ ಕಡಿವಾಣ ಹಾಕಲು ಕಾನೂನು ಜಾರಿ ಮಾಡುವ ಜೊತೆಗೆ ಪ್ರತಿ ಡೇರಿಯಲ್ಲೂ ಹಸುಗಳಿಗೆ ಉಚಿತ ಮೇವು ನೀಡಬೇಕೆಂದು ಮಾ.೨೦ರಂದು ಒಣ ಮೇವು ಮತ್ತು ಹಸುಗಳ ಸಮೇತ ಹಾಲು ಒಕ್ಕೂಟ ಮುತ್ತಿಗೆ ಹಾಕಲು ಮುಳಬಾಗಿಲು ಅರಣ್ಯ ಇಲಾಖೆ ಆವರಣದಲ್ಲಿ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಿದರು.
ಸರ್ಕಾರಿ ಹಾಲು ಒಕ್ಕೂಟಗಳ ಭಿನ್ನಮತವನ್ನೇ ನೆಪವಾಗಿಸಿಕೊಂಡು ಖಾಸಗಿ ಡೇರಿ ಪ್ರಾರಂಭ ಮಾಡುವುದಕ್ಕೆ ಹಾಲು ಒಕ್ಕೂಟದಿಂದ ಲೇ ಜಾಗವನ್ನು ಗುರುತಿಸುವ ಮೂಲಕ ಸರ್ಕಾರಿ ಡೇರಿಗಳ ಅವನತಿಗೆ ಹಾಲು ಒಕ್ಕೂಟವೇ ಕಾರಣ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒಕ್ಕೂಟದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನೋಧ್ಯಮ ದಿನೇ ದಿನೇ ಖಾಸಗಿ ಕ್ಷೇತ್ರವಾಗುತ್ತಿದೆ ಇದರಿಂದ ಗ್ರಾಮೀಣ ಪ್ರದೇಶದ ರೈತಾಪಿ ವರ್ಗಕ್ಕೆ ಸರ್ಕಾರದಿಂದ ಬರುವ ಸಬ್ಸಿಡಿ ಯಶಸ್ವಿನಿ ಯೋಜನೆಗಳಿಂದ ವಂಚಿತವಾಗಿ ಆರೋಗ್ಯ ಹದಗೆಟ್ಟಾಗ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿಗೆ ಖಾಸಗಿ ಹಾಲು ಒಕ್ಕೂಟಗಳ ನಿಯಂತ್ರಣಕ್ಕೆ ಯಾವುದೇ ಕಾಯ್ದೆ ಇಲ್ಲದೆ ಇರುವುದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಖಾಸಗಿ ಡೈರಿಗಳಲ್ಲಿ ಯಾವುದೇ ಅಧಿಕಾರಿಗಳ ನಿಯಂತ್ರಣ ಇಲ್ಲದ ಕಾರಣ ತಮಗೆ ಇಷ್ಟ ಬಂದ ರೀತಿ ಹಾಲನ್ನು ವಿಷಕಾರಿ ವಸ್ತುಗಳಿಂದ ಕಲಬೆರಕೆ ಮಾಡಿ ಜನರ ಆರೋಗ್ಯದ ಜೊತೆಗೆ ಚೆಲ್ಲಾಟ ಹಾಡುವ ಜೊತೆಗೆ ಕಷ್ಟಪಟ್ಟು ಬೇಸಿಗೆಯಲ್ಲೂ ಮೇವಿನ ಕೊರತೆಯಿದ್ದರೂ ಹಾಲು ಉತ್ಪಾದನೆ ಮಾಡುವ ಮಹಿಳೆಯರಿಗೆ ಖಾಸಗಿ ಹಾಲು ಕಲಬೆರಕೆ ದಂದೆ ನುಂಗಲಾರದ ತುತ್ತಾಗಿದೆ ಎಂದು ಅವ್ಯವಸ್ಥೆಯ ವಿರುದ್ದ ಕಿಡಿ ಕಾರಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ,ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಮುಖಂಡರಾದ ಬಂಗಾರಿ ಮಂಜು, ವಿಶ್ವ, ಸುನಿಲ್‌ಕುಮಾರ್, ವಿಜಯ್‌ಪಾಲ್, ಬಾಸ್ಕರ್, ರಾಜೇಶ್, ಸುಪ್ರೀಂಚಲ, ಸಂದೀಪ್‌ಗೌಡ, ಸಂದೀಪ್‌ರೆಡ್ಡಿ, ಜುಬೇರ್‌ಪಾಷ, ಮಾಸ್ತಿ ವೆಂಕಟೇಶ್, ಪೆಮ್ಮದೊಡ್ಡಿ ಯಲ್ಲಪ್ಪ, ಹರೀಶ್, ತೆರ್‍ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಶೈಲ, ಚೌಡಮ್ಮ, ಮುನಿಯಮ್ಮ, ನಾಗರತ್ನ ಇದ್ದರು.