ಖಾಸಗಿ ಕ್ಷೇತ್ರದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಲಿ

ಕೋಲಾರ,ನ.೨: ಕನ್ನಡ ಬಳಕೆ ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ ಖಾಸಗಿ ಕ್ಷೇತ್ರದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಘಟಕ, ಬಿಇಒ ಕಚೇರಿ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ೬೬ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಕನ್ನಡ ಯುವರತ್ನ ಪುನೀತ್ ರಾಜ್‌ಕುಮಾರ್ ನಿಧನದಿಂದ ರಾಜ್ಯೋತ್ಸವ ಕಳೆಗುಂದಿದ್ದು, ಇದರಿಂದ ಸಾಂಕೇತಿಕವಾಗಿ ರಾಜ್ಯೋತ್ಸವವನ್ನು ಎಲ್ಲೆಡೆ ಆಚರಿಸಲಾಗುತ್ತಿದೆಯೆಂದರು.
ಕ್ಷೇತ್ರ ಶಿಕ್ಷಣಾ-ಕಾರಿ ರಾಮಕೃಷ್ಣಪ್ಪ ಮಾತನಾಡಿ, ಕನ್ನಡವನ್ನು ಕಾಯಾವಾಚಾಮನಸಾ ಬೆಳೆಸಲು ಪ್ರತಿಯೊಬ್ಬ ಕನ್ನಡಿಗರೂ ಮುಂದಾಗಬೇಕೆಂದು ಹೇಳಿದರು.
ಕನ್ನಡ ಧ್ವಜಾರೋಹಣ ನೆರವೇರಿಸಿದ ಭಾರತಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ನಿತ್ಯವೂ ಅಗತ್ಯವಿರುವೆಡೆಯೆಲ್ಲಾ ಕನ್ನಡವನ್ನು ಬಳಸುವುದರ ಮೂಲಕ ಮಾತ್ರವೇ ಕನ್ನಡವನ್ನು ಸಮೃದ್ಧಿಯಾಗಿ ಬೆಳೆಸಲು ಸಾಧ್ಯ, ಇದುವರೆವಿಗೂ ಕನ್ನಡ ಬಳಕೆಯಲ್ಲಿದೆಯೆಂಬುದಕ್ಕೆ ಸರಕಾರಿ ಶಾಲಾ ಶಿಕ್ಷಕರ ನಿರಂತರ ಕಲಿಕೆಯೇ ಕಾರಣವಾಗಿದೆಯೆಂದು ಶ್ಲಾಸಿದರು.
ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿ ಗಳಾದ ಎಸ್.ಸುಧಾಕರ್, ಆರ್.ಶ್ರೀನಿವಾಸನ್, ಅಪ್ಪಿ ನಾರಾಯಣಸ್ವಾಮಿ, ವೈ.ಶಿವಕುಮಾರ್, ಬಿಇಒ ಕಚೇರಿ ಸಿಬ್ಬಂದಿಯಾದ ಗಿರೀಶ್, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ, ಕೆ.ಜಯದೇವ್, ವಿವಿಧ ಶಾಲೆಗಳಮುಖ್ಯಶಿಕ್ಷಕರು, ಶಿಕ್ಷಕಿಯರು, ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಇತರರು ಭಾಗವಹಿಸಿದ್ದರು.
ಕನ್ನಡ ಧ್ವಜಾರೋಹಣೆ, ವಂದೇ ಮಾತರಂ ಮತ್ತು ನಾಡಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ನೆರೆದಿದ್ದ ಮಕ್ಕಳಿಗೆ ಸಿಹಿ ವಿತರಿಸಲಾಯಿತು.