
ಕಲಬುರಗಿ,ನ.15: 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆಯಾದ ಹಿನ್ನಲೆಯಲ್ಲಿ ಖಾಸಗಿ ಕೊಳವೆ ಬಾವಿ, ಬೋರ್‍ವೆಲ್‍ಗಳು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮತ್ತು ಜಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಬಿ. ಫೌಜಿಯ್ ತರನ್ನುಮ್ ಅವರು ಸೂಚನೆ ನೀಡಿದರು.
ಬುಧುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ “ಬರಗಾಲ ನಿರ್ವಹಣೆ ಕುರಿತು ಮುಂಜಾಗ್ರತೆ ಕ್ರಮಗಳ ಬಗ್ಗೆ” ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಬರ ಪೀಡಿತ ತಾಲೂಕುಗಳಲ್ಲಿ ಟಾಸ್ಕಪೋರ್ಸ ಸಮಿತಿ ರಚಿಸಲಾಗಿದೆ ಎಂದರು.
ತಾಲೂಕು ಮಟ್ಟದ ಅಧಿಕಾರಿಗಳು ಶಾಸಕರೊಂದಿಗೆ ಪ್ರತಿ 15 ದಿವಸಗಳಿಗೊಮ್ಮೆ ಸಭೆ ನಡೆಸಬೇಕೆಂದರು. ಬರಪೀಡಿತ ಸಂಬಂಧಿಸಿದಂತೆ ಅಧಿಕಾರಿಗಳು ತಮಗೆ ನೀಡಿದ ಕೆಲಸವನ್ನು ಮಾಡಬೇಕೆಂದರು. ಪ್ರತಿ ದಿನ ಟ್ಯಾಂಕರ್ ನಿಗಾವಹಿಸುವುದು. ನೀರಿನ ಗುಣ್ಣಮಟ್ಟ ಪರೀಕ್ಷೆ ಮಾಡಿಕೊಳ್ಳಬೇಕು ಪೈಪ್‍ಲೈನ್ ದುರಸ್ತಿ ನೀರಿನ ಸ್ವಚ್ಪತೆ ಬಗ್ಗೆ ಕ್ರಮವಹಿಸಬೇಕೆಂದರು.
ನೀರು ಕಲುಷಿತ ಆಗದಂತೆ ನೋಡಿಕೊಳ್ಳಬೇಕು ಇಂಜಿನಿಯರ್ ಪ್ಲ್ಯಾನ್ ಮಾಡಿ ನೀರು ಹೇಗೆ ಸಂಗ್ರಹಣೆ ಮಾಡಬೇಕು ಎಂಬುದರ ಬಗ್ಗೆ ಪ್ಲ್ಯಾನ್ ಮಾಡಿ ಕೆಲಸ ಮಾಡುವುದು ಮುಖ್ಯವಾಗಿದೆ ನೀರಿನ ಅಭಾವ ಬಾರದಂತೆ ನೋಡಿಕೊಳ್ಳಬೇಕು. ಪ್ರತಿ ಒಬ್ಬರಿಗೆ ನೀರು ಸಿಗಬೇಕು ಎಲ್ಲಿ ಎಲ್ಲಿ ಎಷ್ಟು ನೀರು ಬೀಡಬೇಕು ಎಂದು ಪ್ಲ್ಯಾನ್ ರೂಪಿಸಿಕೊಳ್ಳಬೇಕೆಂದರು.
ಕೆಎನ್‍ಎನ್‍ಎಲ್. ಜಲ ನಿಗಮದ ಕಾಲುವೆಗಳ ಮೂಲಕ ಕಾಲುವಿಗೆ ಹರಿಸುತ್ತಿರುವ ನೀರನ್ನು ಕುಡಿಯುವ ನೀರಿನ್ನು ಒದಗಿಸುವ ಕೆರೆ/ಶೇಖರಣಾ ಜಲಾಶಯಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಟ್ಟುಕೊಳ್ಳವುದು. ಯಾವುದೇ ಕೆರೆ/ಶೇಖರಣೆ ಜಲಾಶಯಗಳು ಖಾಲಿ ಉಳಿಯದಂತೆ ಹಾಗೂ ಜಲಾಶಯಗಳಿಂದ ಗೇಟ್‍ಗಳಿಂದ ನೀರು ಸೋರಿಕೆಯನ್ನು ತಡೆಗಟ್ಟುವ ಕುರಿತು ಅವಶ್ಯಕ ಕ್ರಮತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬುರಗಿ ಇವರು ತಮ್ಮ ಇಲಾಖೆಯಿಂದ ಒದಗಿಸುವ ಜೆ.ಎಜೆ.ಎಮ್. ಅನುದಾನದಲ್ಲಿ ಅವಶ್ಯಕತೆ ಇರುವ ಕಡೆಗೆ ಕುಡಿಯುವ ನೀರಿನ ಕಾಮಗಾರಿಗಳ ಪ್ರಸ್ತಾವನೆಗಳ ಶೀಘ್ರ ಅನುಮೋದನೆ ಪಡೆಯಬೇಕೆಂದು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಮುಂದಿನ 19 ವಾರಗಳವರೆಗೆ ಮೇವು ಲಭ್ಯವಿದ್ದು, ಪಶುಸಂಗೋಪನೆ ಇಲಾಖೆಯಿಂದ ಕಲಬುರಗಿ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಕಿಟ್ ನೀಡಲು ಸಭೆಯಲ್ಲಿ ತಿಳಿಸಿದರು.
ಮೇವುಗಳ ಸಮಸ್ಯೆಗಳ ಗೋಶಾಲೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಲ್ಲಾ ರೈತರಿಗೆ ಅನುಕೂಲ ಆಗುವಂತೆ ಮೇವುಗಳ ಸಮಸ್ಯೆಗಳನ್ನು ಬಗ್ಗೆಹರಿಸಬೇಕೆಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸರಿಯಾಗಿ ವಿದ್ಯುತ್ ಪೂರೈಸಬೇಕು ನಾವು ಕಚೇರಿಯಿಂದ ಬಿಲ್ ಪಾವತಿ ಮಾಡಿಲ್ಲ ಎಂದರೆ ಕಾರೆಂಟ್ ಕಟ್ ಮಾಡಬಾರದು ಎಂದರು.
ನಗರ ಮತ್ತು ಪಟ್ಟಣ ಮತ್ತು ಗ್ರಾಮಪಂಚಾಯತ್ ಕುಡಿಯುವ ನೀರಿನ ಯೋಜನೆಗಳಿಗೆ ನೀರನ್ನು ಪೂರೈಸುವ ಕುರಿತು ಯಾವುದೇ ರೀತಿಯ ವಿದ್ಯುತ್‍ನ ತೊಂದರೆಯಾಗದಂತೆ ಜೆಸ್ಕಂ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು
2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಿನಲ್ಲಿ ಶೇ. 43% ಮಳೆ ಕೊರತೆಯಿಂದ ಬಿತ್ತನೆ ಕುಂಠಿತಗೊಂಡಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು +93% ಮಳೆಯಿಂದಾಗಿ ಪ್ರಮುಖ ಬೆಳೆಗಳಾಗದ ತೂಗರಿ ಹೆಸರು ಉದ್ದು ಸೋಯಾಬೀನ್ ಇತರೆ ಬೆಳೆಗಳು ಅಂದಾಜು 10531 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್ ಸಭೆಯಲ್ಲಿ ತಿಳಿಸಿದರು.
ಬೆಳೆಹಾನಿ:-ಬರಗಾಲದಿಂದ 2,76,360 ಹೆಕ್ಟರ್ ಪ್ರದೇಶ ಹಾನಿಯಾಗಿದೆ, ಸರ್ಕಾರಕ್ಕೆ ಈಗಾಗಲೇ ಪ್ರಸ್ಥಾವನೆ ಸಲ್ಲಿಸಲಾಗಿದೆ. ಪ್ರಮುಖ ಬೆಳೆಗಳಾದ ತೊಗರಿ 1,94,960 ಹೇ. ಹತ್ತಿ. 35,705 ಹೇ.ಕಬ್ಬು 22.399 ಹೇ. ಸೋಯಾಬಿನ್, 16,203 ಹೇ. ಉದ್ದು 5854 ಹೇ. ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.
ಬಿತ್ತನೆ ಕ್ಷೇತ್ರ:- 2023-24 ನೇ ಮುಂಗಾರು ಹಂಗಾಮಿನಲ್ಲಿ ಒಟ್ಟು 8,87014 ಲಕ್ಷ ಹೇಕ್ಟರ್ ಬಿತ್ತನೆ ಕ್ಷೇತ್ರ ಗುರಿಹೊಂದಲಾಗಿದ್ದು, ಒಟ್ಟು 8,72701 ಲಕ್ಷ ಹೆಕ್ಟರಿನಲ್ಲಿ ಒಟ್ಟು 98% ಪ್ರಮುಖ ಬೆಳೆಗಳಾದ ತೊಗರಿ ಹೆಸರು ಉದ್ದು ಸೋಯಾಬೀನ್ ಹತ್ತಿ, ಕಬ್ಬು ಮತ್ತು ಇತರೆ ಬೆಳೆಗಳು ಬಿತ್ತನೆಯಾಗಿದೆ.
ಹಿಂಗಾರು ಹಂಗಾಮಿನಲ್ಲಿ ಒಟ್ಟು 2.222 ಲಕ್ಷ ಹೇಕ್ಟರ್. ಬಿತ್ತನೆ ಕ್ಷೇತ್ರ ಗುರಿ ಹೊಂದಲಾಗಿದ್ದು, ಒಟ್ಟು 910108 ಹೆಕ್ಟರ್‍ನಲ್ಲಿ 41% ಬಿತ್ತನೆಯಾಗಿದ್ದು, ಪ್ರಮುಖ ಬೆಳೆಗಳಾದ ಹಿಂಗಾರಿ ಜೋಳÀ, ಕಡಲೆ ಗೋಧಿ ಸೂರ್ಯಕಾಂತಿ ಶೇಂಗಾ ಕುಸುಬೇ ಇತರೆ ಬೆಳೆಗಳು.
ಬೆಳೆ ಸಮೀಕ್ಷೆಗಳು ರೈತ ಭಾಂಧವರು ತಮ್ಮ ಕ್ಷೇತ್ರದಲ್ಲಿ ದಾಖಲಾದ ಬೆಳೆ ಬಗ್ಗೆ ಆಕ್ಷೇಪಣೆಯಿದ್ದಲ್ಲಿ ತಮ್ಮ ಮೊಬೈಲ್ ಮೂಲಕ ಬೆಳೆ ದರ್ಶಕ ಆಪ್‍ನಲ್ಲಿ ಸಲ್ಲಿಸಬಹುದು ಎಂದರು.
ಬೆಳೆ ವಿಮೆ:- 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,62,077 ರೈತರು, 1,86,890 ಹೇಕ್ಟರ್‍ಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಿರುತ್ತಾರೆ. ಮುಂಗಾರು ಬೆಳೆ ವಿಮೆ ಒಟ್ಟು ರೂ. 108.595 ಕೋಟಿ 138355 ರೈತರ ಬ್ಯಾಂಕ ಖಾತೆ ಜಮೆಯಾಗಿರುತ್ತದೆ. ಸತತ ಮೂರು ವಾರಗಳವರೆ ಮಳೆ ಕೊರತೆಯಿಂದ ತೊಗರಿ ( ಮಳೆ ಆಶ್ರಿತ) ಬೆಳೆ ಹಾನಿಯಾಗಿರುವ ” ಔಟಿ ಂಛಿಛಿouಟಿಣ Pಚಿಥಿmeಟಿಣ ಜue ಣo ಒiಜ seಚಿsoಟಿ ಂಜveಡಿsiಣಥಿ “ಬೆಳೆ ವಿಮಾ ನಷ್ಟ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೆಲವು ಹಳ್ಳಿಗಳಲ್ಲಿ ಡಂಗೂರು ಸಾರುವುದರ ಮೂಲಕ ಪ್ರಚುರಪಡಿಸಲು ಸೂಚಿಸಿದರು.
ಎಫ್‍ಐಡಿ ನೊಂದಣಿ: ಜಿಲ್ಲೆಯಲ್ಲಿ ಒಟ್ಟು 4,21,715 ಭೂಹಿಡುವಳಿದಾರರಿದ್ದು, ಇದರಲ್ಲೆ 3,93,232 ರೈತರು ಎಫ್‍ಐಡಿ ನೊಂದಾಯಿಸಿದ್ದು ಇರುತ್ತದೆ. ಅನಾವೃಷ್ಠಿಯಿಂದ ಆದ ಬೆಳೆ ಹಾನಿ ಹಾಗೂ ತೊಗರಿ ನೆಟೆ ರೋಗ ಪರಿಹಾರ ಪಡೆಯಲು ಎಫ್‍ಐಡಿ ಮಾಡಿಸುವ ಅವಶ್ಯಕತೆ ಇರುತ್ತದೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ,ರೈತರು ಕಡ್ಡಾಯವಾಗಿ ತಮ್ಮ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ತೋಟಗಾರಿಕೆ ಇಲಾಖೆ ಕಚೇರಿ ಸಿಎಸ್‍ಸಿ ಕೇಂದ್ರಗಳಿಗೆ ಭೇಟಿ ನೀಡಿ ಎಫ್‍ಐಡಿ. ಮಾಡಿಸಿಕೊಳ್ಳಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಗಜಾನಂದ ಬಾಳೆ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಆಶಪ್ಪ ಪೂಜಾರಿಇಂಜಿಯರ್‍ಗಳು ತಾಲೂಕ ಮಟ್ಟದ ಇಂಜಿನಿಯರ್‍ಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಕಂದಾಯ ಇಲಾಖೆ ತಹಶೀಲ್ದಾರರು ಭಾಗವಹಿಸದ್ದರು.