ಖಾಸಗಿ ಆಸ್ಪತ್ರೆಯ ವೈದ್ಯರ ಸೇವೆಗೆ ಶ್ಲಾಘನೆ

ಹೊನ್ನಾಳಿ.ಮೇ.3 ; ಹೊನ್ನಾಳಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನ ರೋಗಿಗಳಿಗೂ ಮತ್ತು ಬೇರೆ ರೋಗಗಳಿಗೆ ಚಿಕಿತ್ಸೆ ಕೊಡುವಲ್ಲಿ ಖಾಸಗಿ ಡಾಕ್ಟರುಗಳು ಹಿಂಜರಿಯುತ್ತಿದ್ದಾರೆ ಆದರೆ  ಹೊನ್ನಾಳಿಯಲ್ಲಿ ಶ್ರೀ ಚನ್ನಶ್ರೀ ಕ್ಲಿನಿಕ್ ನ ಡಾ. ರಾಮನಗೌಡ ಹಾಗೂ ಸಹಾಯಕಿ ಶಾರದಾ ಸಿಸ್ಟರ್  ಅಭೂತಪೂರ್ವ ಸೇವೆಯನ್ನು  ಸಲ್ಲಿಸುತ್ತಿದ್ದಾರೆ.ಎಲ್ಲಾ ಖಾಸಗಿ ವೈದ್ಯರು ಇವರಂತೆಯೇ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದಲ್ಲಿ ಕೊರೋನಾ ರೋಗವನ್ನು ನಿಯಂತ್ರಿಸಲು  ಸಾಧ್ಯವಾಗಬಹುದು ಹಾಗೇನೇ ಬೇರೆ ಬೇರೆ ಕಾಯಿಲೆ ಬಳಲುವವರು ಧೈರ್ಯದಿಂದ ಬಂದು ಚಿಕಿತ್ಸೆಯನ್ನು ಪಡೆಯುವಂತೆ ಆಗುತ್ತದೆ ಎಂದು  ಸಾರ್ವಜನಿಕರು ಹೇಳುತ್ತಿದ್ದಾರೆ.