ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರ ಸೇವೆ ನಿರ್ಬಂಧಕ್ಕೆ ಆಗ್ರಹ

ಬೀದರ್,ನ.13-ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ನಿರ್ಬಂಧ ಮಾಡಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ತಾಲ್ಲೂಕ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
Àಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಸಕಲ ಸೌಲಭ್ಯಗಳು ನೀಡಿ ಬಡ ಜನರ ಸೇವೆಗೆ ಮಾಡಲು ಅವಕಾಶ ಕಲ್ಪಿಸಿದರೆ, ವೈದ್ಯಾಧೀಕಾರಿಗಳು ತಮ್ಮ ತಮ್ಮ ಖಾಸಗಿ ಆಸ್ಪತ್ರೆಗಳನ್ನು ಕಟ್ಟುವುದಕ್ಕೆ ಮತ್ತು ಅಲ್ಲಿ ಕೆಲಸ ಮಾಡುವುದಕ್ಕೆ ಮುಂದಾಗಿರುವುದು ಸಾರ್ವಜನಿಕರ ವಲಯದಲ್ಲಿ ಬೇಸರ ಮೂಡಿಸಿದೆ. ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅವರು ಸರ್ಕಾರಿ ವೈದ್ಯರ ಬಗ್ಗೆ ಮಾಡಿಕೊಂಡಿರುವ ಒಪ್ಪಂದವನ್ನು ಜಾರಿ ಮಾಡಿ ಸಾರ್ವಜನಿಕರಿಗೆ 24 ಗಂಟೆ ಸೇವೆ ಸಲ್ಲಿಸಲು ಸೂಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಬೆÉೀಡಿಕೆಯನ್ನು 15 ದಿವಸಗಳೊಳಗಾಗಿ ಜಾರಿ ಮಾಡಬೇಕು. ಇಲ್ಲವಾದರೆ ಜಿಲ್ಲಾಡಳಿತ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಬೀದರ್ ಜಿಲ್ಲಾ ಸಂಯೋಜಕ ಸ್ವಾಮಿದಾಸ ಕೆಂಪೆನೊರ, ಉತ್ತರ ವಿಧಾನಸಭಾ ಕ್ಷೇತ್ರದ ತಾಲೂಕಾ ಅಧ್ಯಕ್ಷ ಡಾ.ಜಮೀಸ್, ತಾಲೂಕ ಉಪಾಧ್ಯಕ್ಷ ಶೇಖ್ ಮಹೆಬೂಬ್, ರಾಜಕುಮಾರ ಡೋಗ್ರೆ, ರಾಘವೇಂದ್ರ, ಅಲ್ತಾಫ್ ಖುರೇಶಿ, ನವೀನ್, ರೇಗನ್ ರಾಯ್, ನಾಗನಾಥ, ಅವಿನಾಶ ಸೂರ್ಯವಂಶಿ, ಸಂದೀಪ ಕಾಂಬಳೆ, ರಾಜಕುಮಾರ ನಥಾನಿಯಲ್, ನಾಗನಾಥ ಡೊಣ್ಣೆ, ವಿಲ್ಸನ್ ಕುಡುತೆನೋರ, ಸಿದ್ಧಾರೂಢ ಹಡಪದ, ಇಸ್ಮಾಯಿಲ್ ಜನವಾಡಾ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.