ಖಾಸಗಿ ಅರ್ಚಕರಿಗೆ ಪ್ಯಾಕೇಜ್ ಘೋಷಿಸಿ

ಬೀದರ:ಜೂ.6: ರಾಜ್ಯದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಘೋಷಿಸಿದ ಪ್ಯಾಕೇಜಿ ನಲ್ಲಿ ಸರಕಾರದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲ ಯಗಳ ಅರ್ಚಕರಿಗೆ ಮಾತ್ರ ಧನ ಸಹಾಯ ಘೋಷಿಸಿದ್ದು ಸರಿಯಲ್ಲ, ರಾಜ್ಯದಲ್ಲಿರುವ ಸರಕಾರ ಸೇರಿ ಖಾಸಗಿಯಾಗಿ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರಿಗೆ ಮತ್ತು ಪುರೋಹಿತರಿಗೆ ನೀಡಬೇಕೆಂದು ಬಾವಗಿ ಭದ್ರೆಶ್ವರ ಮಠದ ಶಿವಕುಮಾರ್ ಸ್ವಾಮಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ, ಪತ್ರಕರ್ತ ಅನಿಲ್ ಸ್ವಾಮಿ, ಶ್ರೀ ರೇಣುಕ ಮಾಹೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಮಘದ ಉಪಾಧ್ಯಕ್ಷ ಶ್ರೀಕಾಂತ್ ಸ್ವಾಮಿ ಸೋಲಪೂರ, ಕಿರಣ್ ಹಿರೇಮಠ ಒತ್ತಾಯಿಸಿದ್ದಾರೆ.

ಈ ಕುರಿತು ಜಂಟಿ ಪ್ರಕಟಣೆ ಹೊರಡಿಸಿರುವ ಇವರುಗಳು, ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಪೂಜೆ ಮಾಡುವವರು ಮಾತ್ರ ಅರ್ಚಕರು ಪುರೋಹಿತರೇ? ಎಂದು ಖಾರವಾಗಿ ಪ್ರಶ್ನಿಸಿರುವ ಅವರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲ ದೇವಾಲಯಗಳು ಬಂದ ಆಗಿದ್ದು ಇದರಿಂದ ಪೌರೋಹಿತ್ಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಆರ್ಚಕರು ಕಷ್ಟದಲ್ಲಿ ಇದ್ದಾರೆ. ಕೊಡಲೇ ಇವರಿಗೂ ಧನ ಸಹಾಯ ಸಿಗುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.