ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೧; ಖಾಸಗಿ ವಾಹಿನಿಯವರು ನನ್ನ ಮೇಲೆ ಮಾಡಿದ್ದ ಆರೋಪಕ್ಕೆ ನ್ಯಾಯಾಲಯವು ಸಮನ್ಸ್ ನೀಡಿದೆ ಇದು ನನ್ನ ಪ್ರಾಮಾಣಿಕತೆಗೆ ಸಂದ ಜಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಎಂಆರ್ ಟಿಸಿ ಹಾಗೂ ಕೆಎಸ್ ಆರ್ ಟಿಸಿ ನೌಕರರ ಹೋರಾಟ ಹಿಂಪಡೆಯಲು ಸುಮಾರು ೩೫ ಕೋಟಿ ಪಡೆದು ವಂಚನೆ ಮಾಡಿದ್ದೇನೆ ರಂದು ಖಾಸಗಿ ವಾಹಿನಿಯೊಂದು ನನ್ನನ್ನು ಖಳನಾಯಕ,ಮೋಸಗಾರ,ಸುಳ್ಳುಗಾರ ಎಂಬ ಪದ ಬಳಕೆ ಮಾಡಿ ನನ್ನ ತೇಜೋವದೆ ಮಾಡಿದ್ದಾರೆ.ಇದರ ಜೊತೆ ದೆಹಲಿಯಲ್ಲಿ ನಡೆಯುತ್ತಿದ್ದ ರೈತ ಹೋರಾಟವನ್ನು ಮುಕ್ತಾಯಗೊಳಿಸುತ್ತೇನೆ ಎಂದು ಸುಮಾರು ಕೋಟಿಗಟ್ಟಲೇ ಹಣ ಮಾಡಿದ್ದೇನೆ ಎಂದು ನಿರಂತರ ಸುದ್ದಿ ಮಾಡುವುದರ ಮೂಲಕ ರೈತ ಸಂಘಕ್ಕೆ ಕೆಟ್ಟ ಅಪವಾದ ಹೊರಿಸಲಾಗಿತ್ತು.ಈ ಬಗ್ಗೆ ವಾಹಿನಿಯ ಮುಖ್ಯಸ್ಥರು,ನಿರೂಪಕರು ಹಾಗೂ ಇತರರ ಮೇಲೆ ಬೆಂಗಳೂರಿನ ಅಡಿಷನಲ್ ಚೀಫ್ ಮ್ಯಾಜಿಸ್ಟ್ರೇಟರ್ ಕೋರ್ಟ್ ಇದೇ ಜುಲೈ ೭ ರಂದು ಕ್ರಿಮಿನಲ್ ಮೊಕದ್ದಮೆ ಐಪಿಸಿ ೪೯೯ ಮತ್ತು ೫೦೦ ಈ ಮೊಕದ್ದಮೆ ದಾಖಲಿಸಿಕೊಂಡು ಅವರಿಗೆ ನ್ಯಾಯಾಲಕ್ಕೆ ಹಾಜರಾಗುವಂತೆ ಎಚ್ಚರಿಕೆಯ ಸಮನ್ಸ್ ನೀಡಲಾಗಿದೆ ಇದರಿಂದ ಪ್ರಾಮಾಣಿಕರನ್ನು ಕಳ್ಳರು ಎಂದು ಪ್ರಚಾರ ಮಾಡಿದ್ದ ಅನೇಕರ ಬಾಯಿಗೆ ಬೀಗ ಬಿದ್ದಂತೆ ಆಗಿದೆ ಎಂದರು.ಆರೋಪ ಮಾಡುವುದೇ ದೊಡ್ಡ ಸಾಧನೆ ಎಂದು ಬಿಂಬಿಸುವವರಿಗೆ ನ್ಯಾಯಾಲಯ ತಕ್ಕ ಉತ್ತರ ನೀಡಿದೆ.ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದ್ದರು. ರೈತಸಂಘ ಕರ್ನಾಟಕದಲ್ಲಿ ಅಳಿಸಿ ಹಾಕುವ ಪ್ರಯತ್ನ ಮಾಡಲಾಗಿತ್ತು ಆದರೆ ನಾನು ಭ್ರಷ್ಟನಾಗಲಿಲ್ಲ ಪ್ರಚಾರ ಮಾಡಿದವರು ಭ್ರಷ್ಟರಾದರು.ನಮ್ಮ ನೈತಿಕತೆ,ಪ್ರಾಮಾಣಿಕತೆ ಮುಂದೆ ಯಾವ ಷಡ್ಯಂತ್ರ ನಡೆಯಲಿಲ್ಲ ಎಂದರು.ಖಾಸಗಿ ವಾಹಿನಿಯವರ ಮೇಲೆ ಮುಂದಿನ ದಿನಗಳಲ್ಲಿ ಮಾನಹಾನಿ ಪ್ರಕರಣ ದಾಖಲು ಮಾಡುವ ಕುರಿತು ವಕೀಲರೊಂದಿಗೆ ಚರ್ಚೆ ಮಾಡಲಾಗುವುದು ಎಂದರು.ಜು.೧೯ ರಂದು ರೈತ ಸಂಘದಿಂದ ಶಿವಮೊಗ್ಗದಲ್ಲಿ ಹಿರಿಯ ಹೋರಾಟಗಾರರು,ರಾಜಕೀಯ ಧುರೀಣರಾದ ಹೆಚ್.ಎಸ್ ರುದ್ರಪ್ಪ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಶಿವಮೊಗ್ಗದ ಪ್ರವಾಸಿ ಮಂದಿರದಿಂದ ಅಂದು ಬೆಳಗ್ಗೆ ೧೦.೩೦ ಕ್ಕೆ ರುದ್ರಪ್ಪನವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ನಂತರ ಬೆಳಗ್ಗೆ ೧೧.೩೦ ಕ್ಕೆ ಮತ್ತೂರು ಕ್ರಾಸ್ ಬಳಿ ವೇದಿಕೆ ಕಾರ್ಯಕ್ರಮ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮಿಜಿಯವರ ನೇತೃತ್ವದಲ್ಲಿ ಜರುಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶತಕೋಟಿ ಬಸವಣ್ಣ,ಮಹಾದೇವಿ ಬೇವಿನಾಳ್ ಮಠ,ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ,ಆರಾಧ್ಯ,ಚಿನ್ನಸಮುದ್ರ ಶೇಕಜರ್ ನಾಯ್ಕ್ ಉಪಸ್ಥಿತರಿದ್ದರು.