ಬೀದರ:- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾಶೆಂಪೂರ (ಪಿ) ತಾ.ಜಿ. ಬೀದರ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮಕ್ಕಳಿಗೆ ಸಹಿ ಹಂಚಿ ಸ್ವಾಗತಿಸಲಾಯಿತು. ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಮೋಹನ ಸಾಗರ ಶಿಕ್ಷಣ ಪ್ರೇಮಿಗಳು ಖಾಶೆಂಪೂರ (ಪಿ), ಸುನೀಲ ಅಂಬ್ರೀಷ ಹಾಗೂ ಶಿವರಾಜ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಶ್ರೀದೇವಿ ಶಿಂಧೆ, ಶಿಕ್ಷಕಿಯರಾದ ಶಶಿಕಲಾ, ಜೈಶ್ರೀ, ಕೋಕಿಲ ಕುಮಾರಿ, ಅರ್ಚನಾ, ರಾಧಾ, ಮಾರ್ಥಾ, ಶಿಕ್ಷಕರಾದ ಪರಮೇಶ್ವರ ಇನ್ನೀತರರು ಉಪಸ್ಥಿತರಿದ್ದರು.