ಖಾಶೆಂಪುರ್: ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವ ಸಂಪನ್ನ

ಬೀದರ್ ಡಿ.28: ಡಿ. 22ರಂದು ವಿವಿಧ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆರಂಭವಾಗಿದ್ದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ (ಪಾನ್) ಗ್ರಾಮದ ದತ್ತ ಮಹಾರಾಜರ ಅವತಾರ ಪುರುಷ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಮಂಗಳವಾರ ಸಂಜೆ ರಥೋತ್ಸವದೊಂದಿಗೆ ಸಂಪನ್ನವಾಯಿತು.
ಡಿ. 22ರಂದು ಖಾಶೆಂಪುರ್ ಪಿ ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಗ್ರಾಮಸ್ಥರು ಆರಂಭಿಸಿದರು. 23 ಮತ್ತು 24ರಂದು ಎರಡು ದಿನ ಸಂಗೀತ ಹಾಗೂ ಭಜನೆ ಕಾರ್ಯಕ್ರಮಗಳು ಜರುಗಿದವು.
25ರಂದು ಕಲಮೂಡದ ಸುಕ್ಷೇತ್ರ ಸೊಂತ್ ಮಠದ ಶ್ರೀ ಶ್ರೀ ಶ್ರೀ ಅಭಿನವ್ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜರು, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಟಗಾದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಮಠದ ಶ್ರೀ ಶರಣಯ್ಯಾ ಸ್ವಾಮೀಜಿ, ಬೀದರ್ ತಾಲೂಕಿನ ಕಮಠಾಣಾದ ಗವಿಮಠದ ಶ್ರೀ ಶ್ರೀ ಷ.ಬ್ರ 108 ಸದ್ಗುರು ರಾಚೋಟೇಶ್ವರ ಶಿವಚಾರ್ಯ ಮಹಾರಾಜರು, ಶ್ರೀ ಅರ್ಜುನಗಿರಿ ಮಹಾರಾಜರು ಸೇರಿದಂತೆ ಅನೇಕ ಶರಣರು, ಮಠಾದೀಶರು ದರ್ಶನ ನೀಡಿ, ಆಶೀರ್ವಚನ ನೀಡಿದರು. ಇದೇ ವೇಳೆ ರಾತ್ರಿ ಪಾದಪೂಜೆ ಹಾಗೂ ಭಜನೆ ಮತ್ತು 1001 ದೀಪೆÇೀತ್ಸವ ಕಾರ್ಯಕ್ರಮಗಳು ಜರುಗಿದವು.
ಇನ್ನೂ 26ರಂದು ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ ಮೂರ್ತಿಗೆ ಮಹಾರುದ್ರಾಭಿμÉೀಕ ಮಾಡಿ, 101 ಜನ ಆರತಿ ಹಿಡಿದ ಮುತೈದೆಯರೊಂದಿಗೆ ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು. ಬಳಿಕ ಗ್ರಾಮದ ಹನುಮಾನ ಮಂದಿರ ಮತ್ತು ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ ದೇವಸ್ಥಾನದ ಹತ್ತಿರ ಮೊಸರು (ಗಡಗಿ) ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಶಸ್ತಿ ವಿತರಣೆ:
ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಯುವಕರು ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪ್ರಶಸ್ತಿ ವಿತರಿಸಿ ಸನ್ಮಾನಿಸಿ ಗೌರವಿಸಿದರು. ಇದೇ ಗ್ರಾಮದ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದೇವಸ್ಥಾನ ಸಮಿತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮದಲ್ಲಿ ನಾಟಕ ಪ್ರದರ್ಶನ:
ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಬೇನಕಿಪಳ್ಳಿಯ ಓಂ ಅಲ್ಲಮಪ್ರಭುಲಿಂಗೇಶ್ವರ ನಾಟ್ಯ ಸಂಘದಿಂದ ಭಗವಂತ ಕೊಟ್ಟ ಭಾಗ್ಯ ಎಂಬ ನಾಟಕ ಪ್ರದರ್ಶನ ನಡೆಯಿತು.
ಕುಸ್ತಿ ಪಂದ್ಯಾವಳಿ:
ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಗ್ರಾಮದ ದೇವಸ್ಥಾನದ ಆವರಣದಲ್ಲಿ ಜಂಗೀ ಕುಸ್ತಿ ಪೈಲ್ವಾನರಿಂದ ಕುಸ್ತಿ ಪಂದ್ಯಾವಳಿಗಳು ನಡೆದವು.
ಮೆರಗು ಹೆಚ್ಚಿಸಿದ ಸಿಡಿಮದ್ದು (ಪಟಾಕಿ):
ಜಾತ್ರಾ ಮಹೋತ್ಸವದ ರಥೋತ್ಸವ ಕಾರ್ಯಕ್ರಮದ ಯಶಸ್ವಿಯ ಬಳಿಕ ಸಿಡಿಮದ್ದು (ಪಟಾಕಿ) ಗಳನ್ನು ದೇವಸ್ಥಾನದ ಆವರಣದಲ್ಲಿ ಸಿಡಿಸಲಾಯಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಸಿಡಿದ ಸಿಡಿಮದ್ಧುಗಳು ಜಾತ್ರಾ ಮಹೋತ್ಸವದ ಮೆರಗು ಹೆಚ್ಚಿಸಿದವು.
ಮಹಾಪ್ರಸಾದ ವ್ಯವಸ್ಥೆ:
ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿರವರ 7ನೇ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.22 ರಿಂದ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಆರಂಭಿಸಲಾಗಿತ್ತು. ರಥೋತ್ಸವದ ದಿನದಂದು ಮಹಾ ಪ್ರಸಾದ ವ್ಯವಸ್ಥೆ ಇತ್ತು. ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಸೇರಿದಂತೆ ಅನೇಕರು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಇಟಗಾದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಮಠದ ಶ್ರೀ ಶರಣಯ್ಯಾ ಸ್ವಾಮೀಜಿ, ಕಮಠಾಣಾದ ಗವಿಮಠದ ಶ್ರೀ ಶ್ರೀ ಷ.ಬ್ರ 108 ಸದ್ಗುರು ರಾಚೋಟೇಶ್ವರ ಶಿವಚಾರ್ಯ ಮಹಾರಾಜರು, ಶ್ರೀ ಅರ್ಜುನಗಿರಿ ಮಹಾರಾಜರು, ಖಾಶೆಂಪುರ್ ದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನದ ಅರ್ಚಕರಾದ ಶ್ರೀ ಶಿವಾನಂದ ಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ನಿವೃತ ಡಿ.ಹೆಚ್.ಓ ಡಾ. ಮಾಥಾರ್ಂಡರಾವ್ ಖಾಶೆಂಪುರ್, ಶಾಂತಲಿಂಗ ಸಾವಳಗಿ, ಬಾಬುರಾವ್ ತಮಗೊಂಡ, ರಾಜು ಖಾಶೆಂಪುರ್, ಶಿವಶಂಕರ್ ಪಾಟೀಲ್, ವಿಜಯಕುಮಾರ್ ಖಾಶೆಂಪುರ್, ದತ್ತು ಕಾಡವಾದ, ವಿಶ್ವನಾಥ ಬಾಲೇಬಾಯಿ, ನರಸಣ್ಣ ಬಂಡಿ, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಲಕ್ಷ್ಮಣ ಹೊಸಳ್ಳಿ, ರಾಜು ಪೆÇಲೀಸ್ ಪಾಟೀಲ್, ಶೇಖಪ್ಪ ಪೆÇಲೀಸ್ ಪಾಟೀಲ್, ಮಂಜುನಾಥ ಬಾಲೇಬಾಯಿ, ಶಿವಕುಮಾರ್ ಬಾಲೇಬಾಯಿ, ಮೋಹನ್ ಸಾಗರ್, ಕೃಷ್ಣ ಖಾಶೆಂಪುರ್ ಸೇರಿದಂತೆ ಅನೇಕರಿದ್ದರು.