ಖಾಲಿ ಹುದ್ದೆ ಭರ್ತಿಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು, ಮಾ.೦೬- ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಎಐಯುವೈಎಸ್ ಸಿ ಜಿಲ್ಲಾ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.೨ ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡದೇ ನಿರ್ಲಕ್ಷ
ಕೇಂದ್ರ ಮತ್ತು ರಾಜ್ಯ ಸರ್ಕಾರ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ನಿರುದ್ಯೋಗ ಪ್ರಮಾಣವು ದಿನೇದಿನೇ ಏರಿಕೆಯಾಗುತ್ತಲೇ ಇದೆ, ಕಳೆದ ನವೆಂಬರ್‌ನಲ್ಲಿ ಶೇಕಡ ೮.೯೬ ಇದ್ದ ನಗರ ಪ್ರದೇಶದ ನಿರುದ್ಯೋಗವು ಈ ವರ್ಷಾರಂಭದ ಹೊತ್ತಿಗೆ ೧೦,೪೫ಕ್ಕೆ ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿ ಶೇಕಡ ೧,೪೮ ರಿಂದ ೭.೨೩ಕ್ಕೆ ತಲುಪಿದೆ, ಒಟ್ಟಾರೆ ಶೇಕಡ ೮.೩೦ಕ್ಕೆ ಏರಿಕೆಯಾಗಿದೆ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
೨.೫೨ ಲಕ್ಷ ಉದ್ಯೋಗಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ರದ್ದುಪಡಿಸಿ ಕಾಯಂ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದರು.
ಕಳೆದ ೧೪ ತಿಂಗಳಲ್ಲಿಯೇ ಅತ್ಯಂತ ಗರಿಷ್ಟ ಮಟ್ಟ ತಲುಪಿದೆ, ಪ್ರಧಾನಿಮಂತ್ರಿಗಳು ಕಳೆದ ವರ್ಷ ನೀಡಿದ ೧೦ ಲಕ್ಷ ಉದ್ಯೋಗಗಳ ಭರ್ತಿ: ಭರವಸೆಯ ಕಾರ್ಯರೂಪಕ್ಕೆ ಬಂದಿಲ್ಲ. ಅಲ್ಲದೇ ವಿವಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೂ ಸಭೆ ಲಕ್ಷಾಂತರ, ನಿರುದ್ಯೋಗಗಳಿಗೆ ಉದ್ಯೋಗ ಕೊಡಬಹುದು, ಆದರೆ ಸರ್ಕಾರ ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಿರುದ್ಯೋಗ ಯುವಕರಿಗೆ ರಾಜ್ಯ ಬಜೆಟ್ ನಲ್ಲಿ ೨೦೦೦ ಪರಿಹಾರ ನೀಡುವುದಾಗಿ ಭರವಸೆ ನೀಡಿರುವುದು ಖಂಡಿನಿಯ ತಕ್ಷಣವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ಕೈ ಬಿಟ್ಟು ಎಲ್ಲಾ ಹುದ್ದೆಗಳನ್ನು ಖಾಯಂ ಸ್ವರೂಪದಲ್ಲಿ ನೇಮಕ ಮಾಡಿಕೊಳ್ಳಿ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚನ್ನಬಸದ ಜಾನೇಕಲ್,
ರಾಮಚಂದ್ರಪ್ಪ,ವಿನೋದ್ ಕುಮಾರ್, ಯಲ್ಲಪ್ಪ ದೊರೆ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.